ಲಿಂಗಾಯತ ಧರ್ಮವು ಒಂದು ಸ್ವತಂತ್ರ ಧರ್ಮ

ಲಿಂಗಾಯತ ಧರ್ಮವು ಒಂದು ಸ್ವತಂತ್ರ ಧರ್ಮ

ಲಿಂಗಾಯತ ಧರ್ಮಕ್ಕೆ ಬಸವ ಭಕ್ತರೆ ವಾರಸುದಾರರು -ನಮ್ಮ ಧರ್ಮ ಪಿತ ಬಸವಣ್ಣನವರನ್ನು ಸನಾತನಿಗಳ ಹಿಂದೂ ಧರಮದಿಂದ ಹೊರತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿ .ಬಸವಣ್ಣನೆ ತಂದೆ ಬಸವಣ್ಣನೆ ತಾಯಿ ಬಸವಣ್ಣನೆ ಎನಗೆ ಪರಮ ಬಂಧು ಎನಗೆ ವಸುಧಿಶ ಕಪಿಲ ಸಿದ್ದ ಮಲ್ಲಿಕಾರ್ಜುನ ನಿಮಗೆ ಹೆಸರಿಟ್ಟಾತ ಬಸವನ್ನನಯ್ಯ . ದಯವಿಟ್ಟು ಈ ಹೋರಾಟದಲ್ಲಿ ಕೈಜೋಡಿಸಿ .

ಜಂಗಮ ಬಣಜಿಗ ಪಂಚಮಸಾಲಿ ,ಬಣಗಾರ ಗಾಣಿಗ ನೇಕಾರ ಕುರುಬ , ನೋಣಬ ಸಾದರ ,ಶಿವಸಿ೦ಪಿ , ಕುರುಹಿನಶೆಟ್ಟಿ ಗೌಡ ಲಿಂಗಾಯತ ,ಕುಲವಂತ ದಿಕ್ಷವಂತ,ಶೀಲವಂತ,ಜಾಡರ ,ಚತುರ್ಥ ,ಹೂಗಾರ ,ಹಡಪದ ಅಂಬಿಗರ ,ನಾವಿ,ಮೋಚಿ,ಚಮ್ಮಾರ ,ಮೇದಾರ ಮಾದರ ಭಜಂತ್ರಿ,ಲೋಹಾರ ಕಂಬಾರ ಕುಂಬಾರ ಹೀಗೆ ಎಲ್ಲ ಉಪ ಪಂಗಡಗಳನ್ನು ಮರೆತು ಲಿಂಗಾಯತ ಧರ್ಮದ ಮಾನ್ಯತೆ ಹಾಗೂ ಸ೦ವಿಧಾನದ ಮಾನ್ಯತೆ ಮತ್ತು ಅಲ್ಪಸಂಖ್ಯಾತರ ಸ್ಥಾನವನ್ನು ನಾವು ಪಡೆಯಲೇ ಬೇಕು.ಇಡೀ ಜಗತ್ತಿಗೆ ದುಡಿದು ತಿನ್ನಲ ಕಳಿಸಿದ ಧರ್ಮ ಬಸವ ಧರ್ಮ, ಬಂದ ಆದಾಯದೊಳಗೆ ಹಂಚಿ ತಿನ್ನುವ ಧರ್ಮ ಲಿ೦ಗಾಯಾತ ಧರ್ಮ ,ಲಿಂಗಾಯತವು ಒಂದು ಚಳುವಳಿ ಉಗ್ರ ಸ್ವರೂಪ .
ವೇದ ಆಗಮಗಳನ್ನು ದಿಕ್ಕರಿಸಿ ,ಶಾಸ್ತ್ರ ಪುರಾಣಗಳನ್ನು ತಿರಸ್ಕರಿ ಎಲ್ಲ ಸಂಪ್ರದಾಯವನ್ನು ಮನು ಸ್ಮೃತಿಯನ್ನು ವಿರೋದಿಸಿ ಅವೈದಿಕ ಧರ್ಮ ಸ್ಥಾಪಿಸಿದ ಬಸವಣ್ಣ ಇಂದು ಹಿಂದೂಗಳ ಸೇರಗಿನಲ್ಲಿರುವುದು ಅನ್ಯಾಯ ,ಯಾಕೆ ಲಿಂಗಾಯತವು ಸ್ವತಂತ್ರ ಧರ್ಮವಲ್ಲವೇ? ಬ್ರಾಹ್ಮಣ ,ಕ್ಷತ್ರಿಯ ವೈಶ್ಯರು ಮಾತ್ರ ಜನಿವಾರ ಹಾಕುತ್ತಾರೆ ,ಬ್ರಾಹ್ಮಣ ,ಕ್ಷತ್ರಿಯ ವೈಶ್ಯರನ್ನು ಹೊರತು ಪಡಿಸಿ ಉಳಿದವರು ಸತ್ತರೆ ಅವರನ್ನು ಭೂಮಿಯಲ್ಲಿ ಹುಗಿಯುತ್ತಾರೆ .ಹಾಗಿದ್ದಾರೆ ಜನಿವಾರವೂ ಇಲ್ಲದ ಮತ್ತು ಸತ್ತರೆ ಹೂಳಲ್ಪಡುವರು ನಾವುಶೂದ್ರರೆ ??.
ಇಲ್ಲಾ ಇದು ಘೋರ ಅನ್ಯಾಯ ನಾವು ಇಷ್ಟಲಿಂಗ ಹೊಂದಿದವರು,ನಮಗೆ ವಚನ ಗಳೇ ಧರ್ಮ ಗ್ರಂಥ ,ಅಪ್ಪ ಬಸವಣ್ಣನೆ ಧರ್ಮ ಸ್ಥಾಪಕ ,ಲಿಂಗಾಯತ ಧರ್ಮದ ಮಾನ್ಯತೆ ನಮ್ಮ ಹಕ್ಕು ಭಿಕ್ಷೆ ಅಲ್ಲ .ಪ್ರತಿಯೊಬ್ಬ ಲಿಂಗವ೦ತನಿಗೆ ಬಸವ ಧರ್ಮಿಗೆ ನಮ್ಮ ಧರ್ಮದ ಹಕ್ಕಿಗಾಗಿ ಹೋರಾಡಬೇಕು ,ಇಂದು ರಾಜಕಾರಣಿಗಳು ,ಮಠದ ಅಧಿಕಾರಿಗಳು ಸ್ವಾಮಿಗಳು ,ಬಸವಣ್ಣನ ಹೆಸರು ಹೇಳಿ ಬೆಳೆದ ಮಾತಾಜಿ ಅಕ್ಕ,ಅಣ್ಣ,ಜಗದ್ಗುರು ಶರಣರು ಸುಮ್ಮನೆ ಕುಳಿತಿದ್ದಾರೆ .ಇನ್ನು ನಾವು ಸುಮ್ಮನೆ ಕುಳಿತು ಕೊಳ್ಳೋಣವೇ? ಈಗಾಗಲೇ ೯೦೦ ವರ್ಷ ಗತಿಸಿಹೊದವು .

ಬನ್ನಿ ಏಳಿ ಎದ್ದೇಳಿ ನಮ್ಮ ಶಾಸಕರನ್ನು ಎಬ್ಬಿಸಿ ಲೋಕ ಸಭಾ ಸದಸ್ಯರನ್ನು ಕೇಳಿ ನಮಗೆ ಲಿಂಗಾಯತ ಧರ್ಮದ ಮಾನ್ಯತೆ ಹಾಗೂ ಸ೦ವಿಧಾನದ ಮಾನ್ಯತೆ ಮತ್ತು ಅಲ್ಪಸಂಖ್ಯಾತರ ಸ್ಥಾನವನ್ನು ನಮ್ಮ ಹಕ್ಕನು ನಮಗೆ ಕೊಡಲು ಕೇಳಿ ,ಇಲ್ಲದಿರೆ ಇದು ಬಸವಣ್ಣನಿಗೆ ಮಾಡುವ ಅಪಚಾರ .ದಯವಿಟ್ಟು ಶುದ್ಧ ಪ್ರಾಮಾಣಿಕ ಮನಸಿನ್ನಿಂದ ಕೈ ಜೋಡಿಸಿ ತನು ಮನ ಧನದ ಸಹಾಯ ಮಾಡಿರಿ .

 

 

 

 

 

 

 

 

 

ಡಾ ಶಶಿಕಾಂತ ಪಟ್ಟಣ ಪೂನಾ

Don`t copy text!