ಇಂಡೋ-ಬಾಲಿ ಅಂತರರಾಷ್ಟ್ರೀಯ ವಚನ ಸಾಂಸ್ಕೃತಿಕ ಉತ್ಸವದಲ್ಲಿ ಪ್ರೊ.ಸಿದ್ದು ಯಾಪಲಪರವಿ ಉಪನ್ಯಾಸ

ಇಂಡೋ-ಬಾಲಿ ಅಂತರರಾಷ್ಟ್ರೀಯ ವಚನ ಸಾಂಸ್ಕೃತಿಕ ಉತ್ಸವದಲ್ಲಿ ಪ್ರೊ.ಸಿದ್ದು ಯಾಪಲಪರವಿ ಉಪನ್ಯಾಸ

 

 

 

 

 

 

 

 

 

 

ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನ ಈ ವರ್ಷ ಬಾಲಿ,ಮಲೇಷಿಯಾ ಹಾಗೂ ಥೈಲ್ಯಾಂಡ್ ರಾಷ್ಟ್ರಗಳ ಹನ್ನೊಂದು ದಿನಗಳ ಕಾಲ ‘ಭಾರತ ವಚನ ಸಂಸ್ಕೃತಿ ಯಾತ್ರೆ’ಯನ್ನು ಆಯೋಜಿಸಿದೆ.‌
ದಿನಾಂಕ ೨೧ ನವೆಂಬರ್ ೨೦೨೪ ರಂದು ಇಂಡೋನೇಷ್ಯಾದ ಬಾಲಿಯಲ್ಲಿ ‘ಇಂಡಿಯಾ-ಬಾಲಿ ಸಾಂಸ್ಕೃತಿಕ ಸಮಾವೇಶ’ ಸಾಯಂಕಾಲ ೬.೦೦ ಗಂಟೆಗೆ ಜರುಗಲಿದೆ.

ಸಮಾರಂಭದ ದಿವ್ಯ ಸಾನಿಧ್ಯವನ್ನು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಬೆಟ್ಟಳ್ಳಿ ಮಠದ ಪರಮಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯವಹಿಸುವರು.
ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಾ.ಡಿ‌.ವಿ.ಸದಾನಂದಗೌಡರು, ದೇಶದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಡಾ.ವಿ.ಗೋಪಾಲಗೌಡರು ಹಾಗೂ ಇಸ್ರೋದ ಮಾಜಿ ಚೇರಮನ್‌ರಾದ ಡಾ. ಎ.ಎಸ್.ಕಿರಣಕುಮಾರ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ನಾಡಿನ ಬಸವ ಚಿಂತಕರು ಹಾಗೂ ಹಿರಿಯ ಪತ್ರಕರ್ತರಾದ ರಂಜಾನ್ ದರ್ಗಾ ಮತ್ತು ವಚನ ಮಾಧ್ಯಮ ಸಂಸ್ಥೆಯ ಎಂ.ಡಿ. ಹಾಗೂ ನಾಡಿನ ಹೆಸರಾಂತ ಸಾಹಿತಿ ಪ್ರೊ.ಸಿದ್ದು ಯಾಪಲಪರವಿ ಅವರು ‘ವಚನ ಸಾಹಿತ್ಯದ ಜಾಗತಿಕ ಮೌಲ್ಯಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್. ಎಂ. ಸುರೇಶ ಅವರು ಅಧ್ಯಕ್ಷತೆವಹಿಸಲಿದ್ದಾರೆ.

ಅಭಿನಂದನೆಗಳು- ಕಾರಟಗಿ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಪ್ರೊ. ಸಿದ್ದು ಯಾಪಲಪರವಿ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಹಾಗೂ ತಾಲ್ಲೂಕು ಕಸಾಪ ಪದಾಧಿಕಾರಿಗಳು, ಸಾಹಿತ್ಯಾಭಿಮಾನಿಗಳು ಅಭಿನಂದಿಸಿದ್ದಾರೆ.
ಅಂತರರಾಷ್ಟ್ರೀಯ ಖ್ಯಾತಿಯ ಪ್ರೊ.ಯಾಪಲಪರವಿ ಅವರ ಸಾಧನೆ ನಮ್ಮ ಪಾಲಿನ ಹೆಮ್ಮೆ ಎಂದು ಕಸಾಪ ಅಧ್ಯಕ್ಷ ಶರಣು ಕೋಟ್ಯಾಳ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

Don`t copy text!