ಲಿಂಗೈಕ್ಯ ಶ್ರೀ ವೀರಭದ್ರಪ್ಪ ಅಣ್ಣನವರಿಗೆ ನುಡಿ ನಮನ
e-ಸುದ್ದಿ ಸಿಂಧನೂರು
ಕುಷ್ಟಗಿ ರಸ್ತೆಯ ಬಸವ ಪ್ರಸಾದ ನಿಲಯದಲ್ಲಿ ಲಿಂಗೈಕ್ಯ ಶ್ರೀ ವೀರಭದ್ರಪ್ಪ ಅಣ್ಣನವರಿಗೆ ನುಡಿ ನಮನ ಕಾರ್ಯಕ್ರಮ ನೆರವೇರಿತು. ಪ್ರಾರ್ಥನೆಯನ್ನು ಶರಣ ಶ್ರೀ ನಾರಾಯಣಪ್ಪ ಮಾಡಸಿರವಾರ ನಡೆಸಿಕೊಟ್ಟರು. ಸೇರಿರುವ ಎಲ್ಲರೂ ಒಂದು ನಿಮಿಷ ಅವನ ಆಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾದರು. ಶರಣ ಶ್ರೀ ಬಸವಲಿಂಗಪ್ಪ ಬಾದರ್ಲಿ ಸ್ವಾಗತಿಸಿದರು. ಚಂದ್ರೇಗೌಡ ಹರಟನೂರ್ ಕಾರ್ಯಕ್ರಮ ನಿರೂಪಿಸಿದರು.
ಶರಣ ಶ್ರೀ ಚಂದ್ರಶೇಖರ್ ಗೊರೆಬಾಳ ಮಾತನಾಡುತ್ತಾ ವೀರಭದ್ರಪ್ಪನವರು ಸಾಮಾಜಿಕ ಹೋರಾಟಕ್ಕಾಗಿ ತಮ್ಮ ಸ್ವಾಹಿತಾಸಕ್ತಿಯನ್ನು ಬದಿಗಿಟ್ಟು ದುಡಿದರು. ಅವರನ್ನು ನಾನು ಕಳೆದ 30 ವರ್ಷಗಳಿಂದ ಬಲ್ಲೆ. ಅವರ ಜನಪರ ಹೋರಾಟದ ಮನೋಭಾವನೆಗೆ ನಾನು ಮೆಚ್ಚಿದ್ದೇನೆ. ಅವರು ಮತ್ತು ನಾವು ಬಸವಣ್ಣನವರ ಆಶಯದಂತೆ ಹಲವಾರು ಅಂತರ್ಜಾತಿ ವಿವಾಹಗಳನ್ನು ಮಾಡಿದ್ದೇವೆ. ಅವರು ನುಡಿದಂತೆ ನಡೆದ ನಡೆದಂತೆ ನುಡಿದ ವ್ಯಕ್ತಿ. ಇಲ್ಲಿಯವರೆಗೆ ಅವರು ಎಳೆದುಕೊಂಡು ಬಂದಿರುವ ರಥವನ್ನು ನಾವೆಲ್ಲ ಸೇರಿ ಮುಂದೊಯ್ಯಬೇಕಾಗಿದೆ ಎಂದರು.
ಪಂಪಯ್ಯ ಸ್ವಾಮಿ ಸಾಲಿಮಠ ಅಣ್ಣನವರ ಕುರಿತು ಸ್ವರಚಿತ ಕವನ ರಚಿಸಿ ಹಾಡಿದರು.
ಡಿ.ಎಚ್ ಕಂಬಳಿ: ವೀರಭದ್ರಪ್ಪನವರು ತಳ ಸಮುದಾಯದ ಬಗ್ಗೆ ಅಪಾರ ಪ್ರೀತಿ ಉಳ್ಳವರು. ಬಸವ ತತ್ವಕ್ಕಾಗಿ ಪಟ್ಟಭದ್ರರನ್ನು ವಿರೋಧ ಹಾಕಿಕೊಂಡಿದ್ದರು. ಹಾಗಂತ ಯಾರನ್ನು ಅವರು ವೈಯಕ್ತಿಕವಾಗಿ ನಿಂದಿಸಿದವರಲ್ಲ. ಆರ್ಥಿಕವಾಗಿ ಹಿಂದುಳಿದ, ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸಿದರು.
ಬಾಶುಮೀಯಾ: “ ಹೋರಾಟದಲ್ಲಿ ನಮ್ಮೊಂದಿಗೆ ಇದ್ದವರು. ಬಸವ ಕೇಂದ್ರ ಕಟ್ಟಿದವರು. ತಾವೆಲ್ಲ ಮುಂದುವರಿಸಿಕೊಂಡು ಹೋಗಬೇಕಾಗಿದೆ.”
ದೇವೇಂದ್ರಗೌಡ್ರು: ” ನಮ್ಮೊಂದಿಗೆ ಸದಾ ಸ್ಪೂರ್ತಿಯಿಂದ ಇದ್ದವರು. ಅವರ ಕನಸನ್ನ ಸಾಕಾರಗೊಳಿಸುವುದು ಮುಖ್ಯವಾಗಿದೆ.”
ನಿರುಪಾದಪ್ಪ ಗು ವಕೀಲರು: “ ನಮ್ಮಲ್ಲಿನ ಭಾವ ಸದ್ಭಾವಗೊಳಿಸುವುದೇ ಜೀವನ. ಅಂತಹ ಜೀವನ ಅವರದಾಗಿತ್ತು. ವಚನ ಸಾಹಿತ್ಯ ಸತ್ತವರ ಕಥೆಯಲ್ಲ. ಬದುಕಿದವರ ಬದುಕನ್ನು ಹಸನು ಗೊಳಿಸುವುದು. ಇಂಥ ಸಾಹಿತ್ಯವನ್ನು ಹೊತ್ತು ಬಿತ್ತಿದ ಮಹಾತ್ಮ ”
ಪುಟ್ಟಸ್ವಾಮಿಯವರು:”ಹಳ್ಳಿ ಹಳ್ಳಿಗೆ ತತ್ವ ಪ್ರಸಾರ ಮಾಡಿದ ಮಹಾತ್ಮ. ಅವರ ದಾರಿಯಲ್ಲಿ ಸಾಗೋಣ”
ವೀರೇಶ್ RBD ಗಂಗಾವತಿ:” ಅವರು ಜಗತ್ತನ್ನು ಪ್ರೀತಿಸಿದರು ಜಗತ್ತು ಅವರನ್ನು ಪ್ರೀತಿಸಿತು”
ಡಾ.ಶಿವರಾಜ :” ವೀರಭದ್ರಪ್ಪನವರು ನಡೆದಾಡಿದ ವಚನ ಸಾಹಿತ್ಯ. ಅವರ ಹೆಸರಿನಲ್ಲಿ ವಿಚಾರ ಸಂಕಿರಣ, ದತ್ತಿ ಕಾರ್ಯಕ್ರಮಗಳು ನಡೆಯಬೇಕು. ಅನುಭವಿಗಳ ಬರಹ ಸಂಗ್ರಹಿಸಿ ಪುಸ್ತಕ ಹೊರ ತರಬೇಕು”
ರಂಗಪ್ಪ ಬಸವ ಕೇಂದ್ರ ಮಾನ್ವಿ:”ಯಾವ ಮಠಾಧೀಶರು ಮಾಡದ ಕೆಲಸವನ್ನು ಮಾಡಿದ್ದಾರೆ. ಯಲಬುರ್ಗಾ ಕುಷ್ಟಗಿ ತಾಲೂಕಿನ ಹಳ್ಳಿಗಳಲ್ಲಿ ಆ ಅನುಭವ ಮಂಟಪವನ್ನು ಹುಟ್ಟುಹಾಕಿದ್ದಾರೆ”
ಅಮರೇಶಪ್ಪ ಬಳ್ಳಾರಿ ಮರ್ಕಟ:” ನನ್ನ ಬದುಕನ್ನು ಬಸವ ಬದುಕನ್ನಾಗಿ ಪರಿವರ್ತಿಸಿದರು. ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದರು. ನನ್ನಂತ ಹಳ್ಳಿಯವನಿಗೆ ಅನುಭಾವಿಯನ್ನಾಗಿ ಮಾಡಿದರು.”
ವೆಂಕಣ್ಣ ಜೋಶಿ.” ಸ್ಥಾವರಕ್ಕೆ ಅಳಿವುಂಟು ಎನ್ನುವ ಹಾಗೆ ಭೌತಿಕವಾಗಿ ದೂರವಾಗಿದ್ದಾರೆ. ಜಂಗಮಕ್ಕೆ ಅಳಿವಿಲ್ಲ ಎನ್ನುವಂತೆ ಬದುಕಿದ್ದಾರೆ.”
ರಮಾದೇವಿ ಶಂಭೋಜಿ:”ಅವರು ಸಾಗರದಷ್ಟು ಹೃದಯ ವೈಶಾಲ್ಯ ಉಳ್ಳವರು. ನನ್ನನ್ನು ಸಾಹಿತಿಕ ಕ್ಷೇತ್ರದಲ್ಲಿ ಸಕ್ರಿಯವಾಗಲು ಪ್ರೇರೇಪಿಸಿದವರು.”
ಲಿಂಗರಾಜ್ ಅಂಕುಶದೊಡ್ಡಿ.”ಅವರದು ಪ್ರಸಾದ ಕಾಯ. ಸತ್ಸಂಗ ವೆಂಬ ಅಂಗವನ್ನು ಬಿಟ್ಟು ಹೋಗಿದ್ದಾರೆ”
ಪರಶುರಾಮ್ ಮಲ್ಲಾಪುರ್.”LBK ಕಾಲೇಜಿಗೆ ಅವರ ಕೊಡುಗೆ ಅಪಾರ. ಸಂಸ್ಥೆ ಪದವಿ ಮಹಾವಿದ್ಯಾಲಯವಾಗಿ ಬೆಳೆದಿರುವುದಕ್ಕೆ ಅವರೇ ಕಾರಣ. ಆರ್ಥಿಕ ಮು ಗ್ಗಟ್ಟಿನಲ್ಲಿದ್ದಾಗ ಸಹಾಯಕ್ಕೆ ಬಂದ ಮಹಾನುಭಾವ.”
ಮನುಜ ಮತ ಬಸವರಾಜ್ ಬಾದರ್ಲಿ:“ಸರಿಯಾದ ದಾರಿಯಲ್ಲಿ ಸಾಗುವವರಿಗೆ ಎದೆಗಾರಿಕೆ ಬೇಕು, ಧೀರತ್ವ ಬೇಕು. ಅವರು ಮೌಡ್ಯ ವಿರೋಧಿಗಳು. ಮುಂಚೂಣಿ ಹೋರಾಟಗಾರರು.”
ತಿಮ್ಮನಗೌಡ ಚಿಲ್ಕರಾಗಿ ಶರಣರು.” ಅಪರಿಚಿತರ ಮನೆಯಲ್ಲೂ ಕಲ್ಯಾಣ ಮಹೋತ್ಸವ ಮಾಡಿದ ಬಸವ ಪ್ರೇಮಿ. ತನ್ನ ತನು ವೆಂಬ ಮನೆಯನ್ನು ಗೆದ್ದ ಧೀಮಂತ. ದೇವದುರ್ಗ ತಾಲೂಕಿನಲ್ಲಿ ಕೇರಿಗಳಲ್ಲಿ ಲಿಂಗ ಸಂಸ್ಕಾರ ಮಾಡಿದಾತ ”
H G ಹಂಪಣ್ಣ ಸರ್.”ಅವರು ಇಟ್ಟ ಹೆಜ್ಜೆಯಲ್ಲಿ ಬಸವ ತತ್ವ ಬೆಳೆಯಿತು. ಹಡಪದ ಸಮಾಜದ ಶಕ್ತಿಯಾಗಿದ್ದರು. ವೈಚಾರಿಕ ವಿಚಾರವಾಹಿನಿ ಟ್ರಸ್ಟ್ ಮೂಲಕ ಸಾವಿರಾರು ವಚನ ಪುಸ್ತಕಗಳನ್ನು ಹಂಚಿದವರು”
ಡಾಕ್ಟರ್ ಬಸವಪ್ರಭು ಬೆಟ್ಟದೂರು“ಅನಿರೀಕ್ಷಿತ ಘಟನೆಯಿಂದ ದಿಗ್ಭ್ರಮೆಯಾಗಿದೆ. ಅವರ ವಚನ ನಿರ್ವಚನ ಶಕ್ತಿಗೆ ಮೆಚ್ಚಬೇಕು. ವೈಯಕ್ತಿಕವಾಗಿ ನನಗೆ ಬಹಳ ದುಃಖವಾಗಿದೆ.”
ಬಸವರಾಜ್ ಕೋಳಿಹಾಳ.” ಹೆಣ್ಣಿಂಗೆ ಹೊನ್ನಿಂಗೆ ಬಂದವರಲ್ಲ ಬಸವ ಪಥ ತೋರಲು ಬಂದವರು.”
ಕೃಷ್ಣ ವಕೀಲರು.”ನನಗೆ ಬಸವಣ್ಣನವರಂತೆ ಕಂಡವರು. ತಂದೆಯ ಪ್ರೀತಿ ,ತಾಯಿಯ ವಾತ್ಸಲ್ಯ ಅವರಲ್ಲಿತ್ತು”.
ಕರೆಗೌಡ ಕುರುಕುಂದ.”ನನ್ನ ಬಲಗೈ ಕಳಚಿದಂತಾಗಿದೆ. 55 ವರ್ಷಗಳ ಒಡನಾಟ ಮರೆಯಲು ಸಾಧ್ಯವಿಲ್ಲ. ನಾನು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತೇನೆ.”
ಮಲ್ಲಮ್ಮ ಪಾಟೀಲ್.”ನನ್ನನ್ನು ಜಿಡುಗಟ್ಟಿದ ಸಂಪ್ರದಾಯದಿಂದ ಹೊರ ತಂದಾತ. ತಂದೆಯ ಸಮಾನ.”
ಅಶೋಕ್, ಬರಗುಂಡಿ ಅಣ್ಣನವರು.”ಅವರ ಅನುಪಸ್ಥಿತಿಯಲ್ಲಿ ಶೂನ್ಯ ಆವರಿಸದಂತೆ ನೋಡಿಕೊಳ್ಳಬೇಕು. ಅವರ ಜೀವ ,ಭಾವ ,ಸಂಗತಿಯಾಗಿ ಅವರೊಂದಿಗೆ ನಾಡು ಸುತ್ತಿದ ಅಕ್ಕ ಗಂಗಮ್ಮ ತಾಯಿ ದುಃಖದಿಂದ ಹೊರಬರಬೇಕು. ಅಣ್ಣ ಲಿಂಗಾಯತ ಧರ್ಮದ ಅಸ್ಮಿತೆಗಾಗಿ ಹೋರಾಡಿದಾತ. ಬುದ್ಧ ಬಸವ ಅಂಬೇಡ್ಕರ್ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸಿದ ಮಹಾನುಭಾವ.”
ಪೂಜ್ಯಶ್ರೀಗಳು.“ತತ್ವ ನಿಷ್ಠರು, ವಾಲ್ಮೀಕಿ ಕುಟುಂಬವನ್ನು ಲಿಂಗಾಯತರನ್ನಾಗಿ ಪರಿವರ್ತಿಸಿದ ಪುಣ್ಯಾತ್ಮ. ನಾನು ಸ್ವಾಮಿಯಾಗಿ ಮಾಡದ ಕೆಲಸ ಅವರು ಮಾಡಿದ್ದಾರೆ. ಒಬ್ಬ ಜೋಶಿ ಸಮುದಾಯದ ವ್ಯಕ್ತಿ ಹತ್ತಾರು ವಚನಗಳ ಮೂಲಕ ಅವರನ್ನು ಶ್ಲಾಗಿಸಿದ್ದು ನೋಡಿದರೆ ಖುಷಿಯಾಗುತ್ತದೆ. ನಾನು ತಂದೆಯನ್ನು ಕಳೆದುಕೊಂಡಿದ್ದೇನೆ.”
ಶರಣಬಸವ ನೀರ್ಮಾನ್ವಿ ಶರಣ ಸಮರ್ಪಣೆ ಮಾಡಿದರು. ಅಶೋಕಣ್ಣ ಬರಗುಂಡಿಯವರು ವಚನಮಂಗಲ ನೆರವೇರಿಸಿಕೊಟ್ಟರು. ಸುಮಾರು 150 ಕಿಂತ ಹೆಚ್ಚಿನ ಬಸವ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.