ಹಾಡು ಬಾ ಗೆಳತಿಯೇ
ಬಸವ ನೆರಳಿನಲಿ ನಿನ್ನ ಪಯಣ
ಸಾಗು ಸಾಗುತ್ತ ಸಾಗಲಿ
ಜೀಕು ಗಾಣಕೆ ನೊಗವು ಕೊಟ್ಟು
ಜೀಕು ಜೀಕುತ್ತ ಹಾರಲಿ
ಅವನ ಕುಸಿರು ಕಲೆಯು ನಿನಗೆ
ಅಭಯವಿಟ್ಟು ಕಾಪಾಡಲಿ
ದಾರಿ ದಾರಿಗೂ ಜಯದ ಗಂಟೆ
ಬಾರಿ ಬಾರಿಸುತ ಸಾಗಲಿ
ಬಸವ ಮಹಾಮನೆ ನಿನ್ನ ನೆಲೆಯು
ಕೇಳು ಶಾಂತಿ ಪಡೆಯಲಿ
ಹೆಜ್ಜೆ ಹೆಜ್ಜೆಗೂ ಜಯದ ಮಾಲೆ
ನಿನ್ನ ಕೊರಳಿಗೆ ಲಭಿಸಲಿ
ನೂರು ಕೊರಳ ಧ್ವನಿಯ ಕೇಳಿ
ರಾಗ ಹಾಡಿ ಕುಣಿಯುವೆ
ಕುಣಿವ ನವಿಲು ಹೆಜ್ಜೆ ಪಾದಗಳು
ಸದಾ ನಿನ್ನ ಜೊತೆಗೆ ಸಾಗಲಿ
ನಿನ್ನ ಜೊತೆಗೆ ಇದ್ದು ಸುಖವ ಹೆಚ್ಚಿಸಲಿ
ನನ್ನ ಮದುರ ಮಾತು ನಿನಗೆ
ಕರ್ಣ ಕಠೋರ
ನನ್ನ ಬದುಕು ಆಸೆ ಕನಸು
ಜೀವ ರಕ್ಷಕ ಬಸವನು
ಸಾಕಿ ಸಲಹುವ
ಅವನ ನೆರಳು ನಿತ್ಯ ಸುಖವ
ಬಯಸಿ ಸಾಗು ಸಾಗುತ್ತಿರು
ಜಯದ ಪಯಣ ನೂರು
ನನ್ನ ಗೆಲುವಿನ ಒಡತಿಯೇ
ಆಗು ನೀನು ನನ್ನ ಮನೆಗೆ
ಸುಖವ ಬಯಸುವ ಗೆಳತಿಯೇ
ಮರೆಯಲೆಂತು ನನ್ನ ಧ್ವನಿಗೆ
ಕುಣಿದ ಹೆಜ್ಜೆ ನಿನಾದ
ಕೇಳುತ್ತಿರುವೆ ಕರ್ಣ ಮದುರ
ನಯನ ಮನೋಹರ
ಹಾಡು ಬಾರೇ ಗೆಳತಿಯೇ
–ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ