e-ಸುದ್ದಿ ಮಸ್ಕಿ
ದೇವಾಂಗ ಸಮಾಜವನ್ನು ಎಸ್.ಟಿ.ಗೆ ಸೇರಿಸಬೇಕು ಮತ್ತು ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ದೇವಾಂಗ ಸಮಾಜ, ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಕಮೀಟಿ ಸದಸ್ಯರು ಸೋಮವಾರ ಪ್ರತಿಭಟನೆ ಮಾಡಿ ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ದೇವಾಂಗ ಸಮಾಜದವರು ಪಟ್ಟಣದ ಕಲ್ಗುಡಿ ಚೌಡೇಶ್ವರಿ ದೇವಸ್ಥಾನದಿಂದ, ಖಲೀಲವೃತ್ತ, ಹಳೇ ಬಸ್ ನಿಲ್ದಾಣದ ಮುಖಂತಾರ ಮೆರವಣಿಗೆ ನಡೆಸಿ ಬಸವೇಶ್ವರ ವೃತ್ತದ ಹತ್ತಿರ ಪ್ರತಿಭಟನೆ ಮಾಡಿದರು.
ದೇವಾಂಗ ಸಮಾಜದ ಕಾರ್ಯದರ್ಶಿ ರವಿ ಕೊಂಕಲ್ ಮಾತನಾಡಿ ದೇವಾಂಗ ಸಮಾಜದವರು ನೇಕಾರಿಕೆ ವೃತ್ತಿಯಿಂದ ಜೀವನ ನಡೆಸುತ್ತಿದ್ದು ಅತೀ ಬಡವರು ಈ ಸಮಾಜದಲ್ಲಿ ಇದ್ದಾರೆ. ಆರ್ಥಿಕವಾಗಿ, ಸಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು ಎಸ್.ಟಿ.ಗೆ ಸೇರಿಸಬೇಕು ಮತ್ತು ದೇವಾಂಗ ಸಮಜದವರಿಗಾಗಿ ಪ್ರತೇಕ ದೇವಾಂಗ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಅವರಿಗೆ ಸಲ್ಲಿಸಿದರು.
ದೇವಾಂಗ ಸಮಾಜದ ಅಧ್ಯಕ್ಷ ಅಮರಪ್ಪ ಕೊಪ್ಪರದ, ಉಪಾಧ್ಯಕ್ಷರಾದ ಮಂಜುನಾಥ ಮಾಳಗಿ, ಗುರುಲಿಂಗಪ್ಪ ಉಳ್ಳಿ, ಹಿರಿಯ ಮುಖಂಡ ಶಿವಶಂಕ್ರಪ್ಪ ಹಳ್ಳಿ, ಮಂಜುನಾಥ ಬಿಜ್ಜಳ, ಶಂಕ್ರಪ್ಪ ವಕೀಲ ಕೊಂಡಕುಂದಿ, ಶಂಕ್ರಪ್ಪ ಜೋಗಿನ್, ಅಮರೇಶ ವಜ್ರದ, ಆನಂದ ವೀರಾಪುರ, ಅಮರಪ್ಪ ವನಕಿ, ಮಂಜುನಾಥ ಗುಮ್ಮಾ ಹಾಗೂ ಇತರರು ಇದ್ದರು.