ಕೊಪ್ಪಳದ ಶಿಕ್ಷಕ ಶಂಭುಲಿಂಗನಗೌಡರಿಗೆ ರಾಜ್ಯಾಧ್ಯಕ್ಷ ಪಟ್ಟ
e-ಸುದ್ದಿ, ವಿಶೇಷ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಕೊಪ್ಪಳದ ಸರದಾರಗಲ್ಲಿಯ ಸಹಿಪ್ರಾಶಾಲೆಯ ಶಿಕ್ಷಕ ಶಂಭುಲಿಂಗನಗೌಡ ಪಾಟೀಲ್ ಅವಿರೋಧ ಆಯ್ಕೆಯಾಗಿದ್ದಾರೆ.
ರಾಜ್ಯ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸೇರಿ ವಿವಿಧ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನ ಜಿಲ್ಲೆಗೆ ಲಭಿಸಿರುವುದು ಜಿಲ್ಲೆಯ ಶಿಕ್ಷಕರ ಸಂತಸಕ್ಕೆ ಕಾರಣವಾಗಿದೆ. ಕೊಪ್ಪಳ ತಾಲೂಕಿನ ಹಲಗೇರಿ ಮೂಲದವರಾಗಿರುವ ಶಂಭುಲಿಂಗನಗೌಡ ಪಾಟೀಲ್, ಕಳೆದ ಅವಧಿಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಜಿಲ್ಲೆಗೆ ಲಭಿಸಿರುವುದು ಇದೇ ಮೊದಲ ಬಾರಿ ಎಂಬುದು ವಿಶೇಷ.
ಇತರ ಪದಾಧಿಕಾರಿಗಳು: ಮಂಡ್ಯ ಜಿಲ್ಲೆ ಕೋಡಿಕೊಪ್ಪಲು ಶಾಲೆಯ ಶಿಕ್ಷಕ ಕೆ.ನಾಗೇಶ(ಉಪಾಧ್ಯಕ್ಷ), ಬಳ್ಳಾರಿ ಜಿಲ್ಲೆಯ ಚಿನ್ನಾಪುರ ಶಾಲೆಯ ಶಿಕ್ಷಕಿ ಜಿ.ಪದ್ಮಲತಾ(ಉಪಾಧ್ಯಕ್ಷೆ-ಮಹಿಳಾ ಮೀಸಲಾತಿ), ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಯಲ್ಲಮ್ಮನ ಬೂದಿಹಾಳ ಶಾಲೆಯ ಶಿಕ್ಷಕ ಚಂದ್ರಶೇಖರ ನುಗ್ಲಿ(ಪ್ರಧಾನ ಕಾರ್ಯದರ್ಶಿ), ವಿಜಯಪುರ ಜಿಲ್ಲೆ ಓಟಂಗಿಹಾಳ ಶಾಲೆಯ ಶಿಕ್ಷಕ ಸುರೇಶ ಚನ್ನಬಸಪ್ಪ(ಖಜಾಂಚಿ), ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹೇರೂರು ಶಾಲೆಯ ಶಿಕ್ಷಕ ಎಚ್.ಎಸ್. ಚೇತನ(ಸಹ ಕಾರ್ಯದರ್ಶಿ), ಶಿವಮೊಗ್ಗ ಜಿಲ್ಲೆ ಕೊಮ್ಮನಾಳು ಶಾಲೆಯ ಶಿಕ್ಷಕಿ ಜಿ.ಸುಮತಿ(ಸಹ ಕಾರ್ಯದರ್ಶಿ-ಮಹಿಳಾ ಮೀಸಲಾತಿ), ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ರಾಮಸಾಗರ ಶಾಲೆಯ ಶಿಕ್ಷಕ ಎಂ.ಎ.ನಾಗನಗೌಡ(ಸAಘಟನಾ ಕಾರ್ಯದರ್ಶಿ), ಹಾವೇರಿ ಜಿಲ್ಲೆ ಅಗಡಿ ಶಾಲೆಯ ಪಿ.ಟಿ. ಕಾಮನಹಳ್ಳಿ ಮಹಿಳಾ ಮೀಸಲಾತಿಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.