5 ಎ ನೀರಾವರಿ ಕಾಲುವೆ ಅನುಷ್ಟಾನಕ್ಕೆ ಒತ್ತಾಯಿಸಿ ರೈತರಿಂದ ಪತ್ರ ಚಳುವಳಿ

 

e-ಸುದ್ದಿ ಮಸ್ಕಿ

ಎನ್.ಆರ್.ಬಿ.ಸಿ. ಕಾಲುವೆ ವ್ಯಾಪ್ತಿಯ 5 ಎ ನೀರಾವರಿ ಕಾಲುವೆ ಅನುಷ್ಟಾನ ಗೊಳಿಸಬೇಕು ಎಂದು ಒತ್ತಾಯಿಸಿ ನಾನಾ ಹಳ್ಳಿಗಳ ರೈತರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಂಗಳವಾರದಿಂದ ಪತ್ರ ಬರೆಯುವ ಚಳುವಳಿ ಆರಂಭಿಸಿದ್ದಾರೆ.


ಬರ ಪೀಡಿತ ಮಸ್ಕಿ ಕ್ಷೇತ್ರದ ರೈತರು, ಬಡವರು, ಸಾಮಾನ್ಯರು ಬಡತನ ನಿರುದ್ಯೋಗದಿಂದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ದುಡಿಯುವ ಕೈ ಗಳಿಗೆ ಕೆಲಸ ಸಿಗದ ಕಾರಣ ಬೇರೆ ನಗರ ಪ್ರದೇಶಗಳಿಗೆ ಗುಳೆ ಹೋಗಬೇಕಾಗಿದೆ 5 ಎ ಕಾಲುವೆ ಅನುಷ್ಟಾನ ಗೊಳಿಸಿದರೆ ಈ ಭಾಗದ ರೈತರ ಬದುಕು ಹಸನಾಗಲಿದೆ ಕೂಡಲೇ ಸರ್ಕಾರ ನಮ್ಮ ಬೇಡಿಕೆಯನ್ನು ಈಢೇಋಇಸಬೇಕೆಂದು ಹೊರಾಟ ಸಮಿತಿಯ ಮುಖಂಡ ನಾಗರಡ್ಡೆಪ್ಪ ಬುದ್ದಿನ್ನಿ ಒತ್ತಾಯಿಸಿದರು.
ಕಾಲುವೆ ಅನುಷ್ಟಾನಕ್ಕೆ ಒತ್ತಾಯಿಸಿ ಪಾಮನ ಕೆಲ್ಲೂರ ಗ್ರಾಮ ಬಳಿ ರೈತರು ಕಳೆದ 30 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ ರೈತರ ಸಂಕಷ್ಟ ಅರಿತು 5 ಎ ನೀರಾವರಿ ಕಾಲುವೆ ಯೋಜನೆ ಅನುಷ್ಟಾನ ಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಬೇಕು ಎಂದು ರೈತರು ಮಂಗಳವಾರದಿಂದ ಪತ್ರ ಚಳುವಳಿ ಆರಂಭಿಸಿದ್ದಾರೆ ಎಂದು ನಾಗರೆಡ್ಡಪ್ಪ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಸವರಾಜ, ಮುದಕಪ್ಪ. ಮಲ್ಲನಗೌಡ, ಬಸವರಜಪ್ಪಗೌಡ ಹಾಗೂ ಇತರರು ಇದ್ದರು.

Don`t copy text!