ಬಾಲ್ಯದ ಬೆಳಗು
ಕುಟುಕಿದ ಮುಳ್ಳಿನಂತೆ ಕಚ್ಚಿದ ಸೊಳ್ಳೆ,
ನಿದ್ದೆ ಕದ್ದ ನಶ್ವರ ರಾತ್ರಿ.
ಸುತ್ತಲೂ ಅವರ ಗೂಂಜು,
ಎಲ್ಲೋ ದೂರ, ಗಡಿಯಾರದ ದನಿ!
ಕಣ್ಣು ಮುಚ್ಚಿದರೆ ಧಾಳಿಯ ಕೂಗು,
ಹಾತೊರೆದು ಹಾಸಿಗೆಯ ಮೇಲೆ ತಿರುಗಾಟ.
ಆದರೂ, ಬೆಳಿಗ್ಗೆ ಹೊತ್ತು ಬಂದಿದೆ,
ಜವಾಬ್ದಾರಿಯ ನೆರಳು ಕರೆದಿದೆ!
ಒಮ್ಮೆ, ಆ ಹಳೆಯ ದಿನಗಳನ್ನು ನೆನೆಯುತ್ತೇನೆ,
ಅಪ್ಪ-ಅಮ್ಮನ ಒಲವೆಂಬ ಗೂಡು.
ಚಿಗಟೆಯೂ ಕಚ್ಚಿದೆಯೋ ಗೊತ್ತಿರಲಿಲ್ಲ,
ನಿದ್ರೆ ಕದಿಯೋ ದುಃಖ ಇರಲಿಲ್ಲ!
ಅಂದಿನ ಬೆಳಗ್ಗೆ ಎಷ್ಟು ಹಗುರ!
ಗಡಿಯಾರವೂ ಕೂಗಬೇಕಾಗಿರಲಿಲ್ಲ.
ಜವಾಬ್ದಾರಿಯ ಭಾರವಿಲ್ಲದ ದಿನಗಳು,
ಎದ್ದೇಳಲು ಕಾಯುತ್ತಿರಲಿಲ್ಲ ಸೂರ್ಯ ಮೇಲೇಳಲು!
–ವಾಣಿ ಭಟ್ ವಾಪಿ ಗುಜರಾತ