ಶಿವನೊಲಿಮೆ ನಮಗಿರಲಿ ಸದಾ…
ಭಜಿಪೆವು ನಾವು ಶಿವನನು
ಪೂಜಿಪೆವು ನಾವು ಹರನನು
ಭಕ್ತಿಗೆ ಒಲಿವವನು ಶಂಕರನು
ಮುಕ್ತಿಯ ನೀಡುವ ಈಶ್ವರನು
ಗಂಗೆಯ ಶಿರದಲಿ ಧರಿಸಿದ ಗಂಗಾಧರನೆ
ಪರ್ವತರಾಜನ ಪುತ್ರಿಪಾರ್ವತಿ ಪಾಣಿಗ್ರಹಣನೆ
ಮೈಯೆಲ್ಲ ವಿಭೂತಿ ಧರಿಸಿ ಧರೆಯ ಪೊರೆವವನೆ
ಸ್ಮಶಾನದಲಿ ಅಲೆಯುವ ತ್ರಿನೇತ್ರ ನಯನನೆ
ಅಕ್ಕನ ವಚನಗಳ ಚೆನ್ನಮಲ್ಲಿಕಾರ್ಜುನನೇ
ಶರಣೆ ನಿಜದೇವಿಗೆ ಬೊಂತೆ ನೀಡಿ
ಬೊಂತಾದೇವಿಯಾಗಿಸಿದವನೆ
ಅವಳ ವಚನಗಳಲಿ”ಬಿಡಾಡಿ”ಅಂಕಿತನೆ
ಸೃಷ್ಠಿ,ಸ್ಥಿತಿಲಯಗಳಿಗೆ ಕಾರಣ ನೀನೆ
ಸಕಲ ಚರಾಚರಗಳಿಗೆ ಪರುಷಮಣಿಯೆ
ಭಾರಹ ಜೊತಿರ್ಲಿಂಗಗಳಲಿ ನೆಲೆಸಿಹನೆ
ಅರಿಸಿ ಬರುವ ಪಾಮರರ ಪೊರೆಯುವವನೆ
ಸಮುದ್ರ ಮಂಥನದಿ ವಿಷ ಕುಡಿದವನೆ
ನೀಲಕಂಠೇಶ್ವರ ನಂಜುಂಡೇಶ್ವರನೆ
ನಿಜಭಕ್ತರ ಪಾಲಿನ ಕಾಮಧೇನುವೆ
ಹರಹರ ಶಂಕರ ಶಿವಶಂಭುವೆ ನಮಃ
ಲಿಂಗದ ರೂಪದಲಿ ನಿರಾಕಾರನೆ
ಅಂಗದ ಅಂಗೈಯಲಿ ಪೂಜೆಯವನೆ
ಬಿಲ್ವಾರ್ಚನೆಯಲಿ ಸಂತುಷ್ಟನಾದವನೆ
ಲಿಂಗಾಷ್ಟಕೆ ನಾದವಾಗಿ ತ್ರಿಶೂಲಧಾರಿಯೇ
ಎಷ್ಟೆಲ್ಲ ನಾಮಗಳಲಿ ನಾದಮಯನೆ
ನಿನ್ನೊಲುಮೆಯಲಿ ಭಯವೇ ವಿಷಕಂಠನೆ
ನೀನೆ ನಮಗೆಲ್ಲ ನಿನ್ನನೆ ಜಪಿಸುತಿಹೆವೆಲ್ಲ
ಪಂಚಾಮೃತ ಅಭಿಷೇಕಕೆ ಕರುಣಿಸುವವನೆ
ಮಹಾಶಿವರಾತ್ರಿಯ ಮನ್ನನೆಯವನೆ
ಬೇಡರ ಬಾಲನಿಂದ ಕಣ್ಣಪ್ಪನೆನಿಸಿದವನೆ
ಪಂಚಾಕ್ಷರದಿ ಶಿವಾಯ ನಮಃ ಮಂತ್ರಕೆ
ಕುಣಿಯುತ ಬರುವ ವೈಕುಂಠಪತಿಯೇ
ಜಟಾಧಾರಿಯೆ ನಮೋ ನಮಃ
ಶೂಲಪಾಣಿಯೇ ನಮೋ ನಮಃ
ಚಂದ್ರಧಾರಿಯೇ ಕಾಪಾಲಿಕನೆ
ಭುವಿಯಲಿ ನಿನ್ನದೆ ನಾಮ ಅನುದಿನವು
–ಜಯಶ್ರೀ ಭ.ಭಂಡಾರಿ..
ಬಾದಾಮಿ