ಮರದಂತೆ ನೆರಳು ನೀಡುವವಳು..
ಹೆಣ್ಣಿಗೆ ಆಸೆಗಳಿವೆ
ಭಾವನೆಗಳಿವೆ
ಅವಳಿಗೊಂದು ಬದುಕಿದೆ
ದೈವಸ್ವರೂಪಿ ಅವಳು
ತಾಯಿಯಾಗಿ
ಮಡದಿಯಾಗಿ
ಸಹೋದರಿಯಾಗಿ
ಕರುಳಿನ ಕುಡಿ ಮಗಳಾಗಿ
ವಿವಿಧ ಪಾತ್ರವಾಗಿ ಹೊಮ್ಮುವಳು
ಕನಸು ಕಟ್ಟಿಕೊಂಡು
ಆಸೆಗಳಿಗೆ ಬಣ್ಣ ಹಚ್ಚುವಳು
ಕಲ್ಪನಾ ಲೋಕಕ್ಕೆ ಜಾರಿ
ಸಂತಸ ಪಡುವವಳು
ಪ್ರೀತಿ – ಸ್ನೇಹ ವಾತ್ಸಲ್ಯ
ತಾಳ್ಮೆ – ಸಹನೆಯ ಸುಂದರ ಕಲಾಕೃತಿ
ಕಿರುಕುಳ , ಅವಮಾನ
ಅತ್ಯಾಚಾರ – ಅಗೌರವ
ಹೆಣ್ಣಿನ ದಾರುಣ ಸ್ಥಿತಿ
ಅವಳಿಗೆ ಅವಳೇ ಸರಿಸಾಟಿ
ಹೆಣ್ಣು ಬಲುಗಟ್ಟಿಗಿತ್ತಿ
ನೋವ ನುಂಗಿ ನಗೆ ಬೀರಿ
ಸವಾಲುಗಳನ್ನು ಎದುರಿಸುವ ದುರ್ಗೆ
ಸುಖ ಸಂಸಾರಕೆ ಆಧಾರ
ಮನ ಮನಕೆ ಪರಿಹಾರ
ಕಣ್ಣರೆಪ್ಪೆಯಂತೆ ಕಾವಲು
ಮರದಂತೆ ನೆರಳು ನೀಡುವಳು
–ಶ್ರೀಮತಿ ಉಮಾ ಸೂಗೂರೇಶ ಹಿರೇಮಠ ಕನ್ನಾಳ