ಕಾಫಿಯಾನಾ ಗಜಲ್ (ಮಾತ್ರೆಗಳು೨೪)

ಕಾಫಿಯಾನಾ ಗಜಲ್ (ಮಾತ್ರೆಗಳು೨೪)

ರಣ ಬಿಸಿಲು ಮರಳುಗಾಡಿನ ಪಯಣಕೆ ಕೊಡೆ ಹಿಡಿಯಲಿಲ್ಲ
ಕಾರಿರುಳ ಹಾದಿಗೆ ಬೆಳದಿಂಗಳನು ನೀ ಹರಡಲಿಲ್ಲ

ಮೂಡಣದಲಿ ಹೊನ್ನ ಕಿರಣಗಳು ಚೈತನ್ಯ ತುಂಬಿದವು
ಕಂದೀಲನು ಆರಿಸಿ ಒಲವ ಮುತ್ತು ಕೊಡಲು ಬರಲಿಲ್ಲ

ಇಳಿ ಹೊತ್ತು ಮೆಲುಗಾಳಿ ಬಿರಿದ ಕುಸುಮ ಪರಿಮಳ ತಂದಿತು
ಮುಡಿಗೆ ಅನುರಾಗದ ಮಲ್ಲಿಗೆ ನೀ ರಾತ್ರಿ ಮುಡಿಸಲಿಲ್ಲ

ಪ್ರಣಯದ ಪಕ್ಷಿಗಳು ಉಸಿರಲಿ ಉಸಿರು ಬಿರೆಸಿ ಒಂದಾಗಿವೆ
ಒಲುಮೆಯಲಿ ಹೃದಯ ಮೀಟಿ ಬಾಹುವಿನಲಿ ಬಂಧಿಸಲಿಲ್ಲ

ಸಂತೆಯ ಬೀದಿಯಲಿ ಸನ್ನೆ ಮಾಡಿ ಸಿಳ್ಳು ಹಾಕಿ ಕರೆದೆ
“ಪ್ರಭೆ”ಯ ಅಧರಕೆ ಅಮಲಿನ ಅಫೀಮು ನೀ ಲೇಪಿಸಲಿಲ್ಲ

ಪ್ರಭಾವತಿ ಎಸ್ ದೇಸಾಯಿ
ವಿಜಯಪುರ

Don`t copy text!