ಬಿಲ್ ಪಾವತಿಸುವಂತೆ ಗ್ರಾಹಕರಿಗೆ ಜೆಸ್ಕಾಂ ಶಾಕ್

 

e-ಸುದ್ದಿ, ಮಸ್ಕಿ

ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ವಿದ್ಯುತ್ ಬಿಲ್ ಮನ್ನಾ ಮಾಡಬಹದು ಎಂಬ ಆಶಾಭಾವನೆಯಲ್ಲಿದ್ದ ಗ್ರಾಹಕರಿಗೆ ಜೆಸ್ಕಾಂ ಬಿಲ್ ಶಾಕ್ ನೀಡಿದೆ. ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಗೊಳಿಸುವುದಾಗಿ ಜೆಸ್ಕಾಂ ಸಿಬ್ಬಂದಿ ಮೈಕ್ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಕಳೆದ 5-6 ತಿಂಗಳಿನಿಂದ ಜೆಸ್ಕಾಂ ವಿದ್ಯುತ್ ಬಿಲ್ ಪಾವತಿಸುವಂತೆ ಒತ್ತಾಯ ಮಾಡಿರಲಿಲ್ಲ. ಆದರೆ ಈಗ ಬಿಲ್ಲ ಕಟ್ಟಿ, ಇಲ್ಲ ವಿದ್ಯೂತ್ ಸಂಪರ್ಕ ಕಡಿತ ಮಾಡುವುದಾಗಿ ಹೇಳುತ್ತಿದ್ದು ಬಡ ಗ್ರಾಹಕರಿಗೆ ಜೆಸ್ಕಾಂ ಇಲಾಖೆ ಕತ್ತಲು ಭಾಗ್ಯ ನೀಡಲು ಸಜ್ಜಾಗಿದೆ.
ಸರಾಸರಿ ಅಂದಾಜು 3 ರಿಂದ 4 ಸಾವಿರ ವರೆಗೆ ಕರೆಂಟ್ ಬಿಲ್ ಗ್ರಾಹಕರ ಕೈಗೆ ಕೊಟ್ಟಿರುವ ಕಾರಣ ಮನೆ ಮಾಲೀಕರು ಬಿಲ್ ನೋಡಿ ಬೆಚ್ಚಿ ಬಿದ್ದಿದ್ದಾರೆ. 5-6 ತಿಂಗಳು ಸುಮ್ಮನಿದ್ದು ಏಕಾಏಕಿ ಸಾವಿರ ಗಟ್ಟಲೆ ಬಿಲ್ ಕೊಟ್ಟು ಕಟ್ಟು ಎಂದರೆ ಹೇಗೆ ಸಾಧ್ಯ ಎಂದು ಗ್ರಾಹಕರು ಚಿಂತಿಗೀಡಾಗಿದ್ದಾರೆ.
ಕೃಷಿ ಕೂಲಿ ಕಾರ್ಮಿಕರು, ಬಡವರು, ಮದ್ಯಮ ವರ್ಗದವರು ಹಣ ಎಲ್ಲಿಂದ ತರಬೇಕು ತಿಳಿಯದಾಗಿದೆ ಎಂದು ಜನರು ಗೋಳಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಜೆಸ್ಕಾಂ ಸಿಬ್ಬಂದಿ ಮನೆ ಬಾಗಿಲಿಗೆ ತೆರಳಿ ಕರೆಂಟ್ ಬಿಲ್ ಪಾವತಿಸುವಂತೆ ಮನವಿ ಮಾಡುತ್ತಿದ್ದಾರೆ ಗ್ರಾಹಕರು ಸಮಯಾವಕಾಶ ನೀಡುವಂತೆ ಕೇಳುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ದುಡಿಯುವ ಕೈ ಗಳಿಗೆ ಕೆಲಸ ಸಿಗುತ್ತಿಲ್ಲ ಒಪ್ಪತ್ತಿನ ಊಟಕ್ಕೆ ಪಡಿಪಾಟಲು ಪಡಬೇಕಾದ ಪರಿಸ್ಥಿತಿ ಎದುರಾಗಿದೆ ಸರ್ಕಾರ ಜೆಸ್ಕಾಂ ಇಲಾಖೆಯ ಬಿಲ್ ಮನ್ನಾ ಮಾಡಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.
——————-

ಮಸ್ಕಿ ಪಟ್ಟಣದಲ್ಲಿ ಏಪ್ರಿಲ್ ನಿಂದ ನವಂಬರ್ ವರೆಗೆ 30 ಲಕ್ಷ ರೂ.ವಿದ್ಯುತ್ ಬಿಲ್ ಬಾಕಿ ಇದೆ ವಿದ್ಯುತ್ ಬಿಲ್ ಪಾವತಿಸುವಂತೆ ಗ್ರಾಹಕರಲ್ಲಿ ಮನವಿ ಮಾಡಿ ಕೊಳ್ಳಲಾಗುತ್ತಿದೆ ಬಿಲ್ ಪಾವತಿ ಮಾಡದ ಗ್ರಾಹಕರ ಮನೆ, ಅಂಗಡಿಗಳ ವಿದ್ಯುತ್ ಸಂಪರ್ಕ ಕಡಿತ ಗೊಳಿಸಲು ಮೇಲಾಧಿಕಾರಿಗಳು ಆದೇಶ ನೀಡಿದ್ದಾರೆ. – ಜೆಸ್ಕಾಂ ಎಇಇ -ಕೆಂಚಪ್ಪ ಭಾವಿಮನಿ ಜೆಸ್ಕಾಂ ಎಇಇ

Don`t copy text!