ಗುಳೆ ಹೋದ ಮತದಾರರಿಗೆ ಭಾರಿ ಡಿಮ್ಯಾಂಡ್

e-ಸುದ್ದಿ, ಮಸ್ಕಿ

ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಗೆಲ್ಲಲು ಪಣ ತೊಟ್ಟಿರುವ ಅಭ್ಯರ್ಥಿಗಳು ಗುಳೆ ಹೋದ ಮತದಾರರಿಗೆ ಗ್ರಾಮಗಳಿಗೆ ಮರಳಿ ಕರೆತರಲು ಪೈ ಪೋಟಿ ನಡೆಸಿದ್ದಾರೆ.
ದುಡಿಯುವ ಕೈ ಗಳಿಗೆ ಕೆಲಸ ಸಿಗದ ಕಾರಣ ತಾಲೂಕಿನ ನಾನಾ ಹಳ್ಳಿಗಳ ಜನರು ತುತ್ತಿನ ಚೀಲ ತುಂಬಿ ಕೊಳ್ಳಲು ಬೆಂಗಳೂರು ಸೇರಿದಂತೆ ನಾನಾ ನಗರ ಪ್ರದೇಶಗಳಿಗೆ ಮಕ್ಕಳು, ಮರಿ ಕಟ್ಟಿಕೊಂಡು ಕುಟುಂಬ ಸಮೇತರಾಗಿ ಗುಳೆ ಹೋಗಿದ್ದರು.
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಗುಳೆ ಹೋದ ಮತದಾರರನ್ನು ಕರೆ ತರಲು ಭಾರಿ ಡಿಮ್ಯಾಂಡ್ ಬಂದಿದೆ. ಮತದಾನಕ್ಕೆ ಬರಲು ವಾಹನಗಳ ವ್ಯವಸ್ಥೆ ಮಾಡುವ ಜತೆಗೆ ಇಂತಿಷ್ಟು ಹಣ ನೀಡುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಗುಳೆ ಹೋದ ಮತದಾರರು ಖಾಸಗಿ ಬಸ್, ಕ್ರೂಷರ್ ವಾಹನಗಳ ಮೂಲಕ ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ.
ಹೋಗಿ ಬರುವ ಖರ್ಚು ಕೊಡುವದರ ಜತೆಗೆ ಮೂರು ದಿನ ಹಳ್ಳಿಗಳಲ್ಲಿ ಉಳಿಯುವದಕ್ಕಾಗಿ ಹಣ ಕೊಡಬೇಕು ಮತ್ತು ಬಾಡೂಟದ ವ್ಯವಸ್ಥೆ ಮಾಡಬೇಕೆಂಬ ಷರತ್‍ನ್ನು ಗೂಳೆ ಹೋದವರು ಹಾಕಿದ್ದಾರೆ ಎನ್ನಲಾಗಿದೆ.
ಪಟ್ಟಣದ ಹಳೆ ಬಸ್ ನಿಲ್ದಾಣ ಬಳಿ ಕ್ರೂಷರ್, ಇನ್ನಿತರ ಖಾಸಗಿ ವಾಹನಗಳ ಮೂಲಕ ಹಳ್ಳಿಗರು ಮರಳಿ ಹಳ್ಳಿ ಕಡೆ ಹೊರಟಿರುವ ದೃಶ್ಯ ಗಳು ಬಸ್ ನಿಲ್ದಾಣ ಬಳಿ ಕಂಡು ಬಂದವು.

 

Don`t copy text!