ಮಾರುಕಟ್ಟೆ ದರ ಏರಿಸದಂತೆ ವರ್ತಕರು ಒತ್ತಾಯ

e-ಸುದ್ದಿ, ಮಸ್ಕಿ
ಸರ್ಕಾರ ಇತ್ತೀಚಿಗೆ ಏಕಾಎಕಿ ಮಾರುಕಟ್ಟೆ ಶುಲ್ಕವನ್ನು 1 ರೂ.ಗೆ ಏರಿಸಿದೆ. ಕೂಡಲೇ ಇಳಿಸಿ ಈ ಮೊದಲಿನಂತೆ 0.35 ಪೈಸೆ ತೆಗೆದುಕೊಳ್ಳಬೇಕೆಂದು ಪಟ್ಟಣದ ವರ್ತಕರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಜಮಾಯಿಸಿದ ವರ್ತಕರು ಪ್ರತಿಭಟನೆ ನಡೆಸಿ, ವರ್ತಕರ ಸಂಘದ ಅಧ್ಯಕ್ಷ ಆದಯ್ಯಸ್ವಾಮಿ ಕ್ಯಾತನ್ನಟ್ಟಿ ಮಾತನಾಡಿ ಕರೊನಾ ಹಿನ್ನಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತವಾಗಿದ್ದು ಖರ್ಚುವೆಚ್ಚಗಳು ಅಧಿಕವಾಗಿವೆ. ಇದರಿಂದ ವ್ಯಾಪರಸ್ಥರು ತೊಂದರೆಯಲ್ಲಿದ್ದಾರೆ ಎಂದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಸಲ್ಲಿಸಿದರು.
ವರ್ತಕರಾದ ಶಿವಶಂಕರಪ್ಪ ಹಳ್ಳಿ, ಪಂಪಣ್ಣ ಗುಂಡಳ್ಳಿ, ಲಕ್ಷ್ಮೀನಾರಯಣ ಶಟ್ಟಿ, ಚನ್ನಪ್ಪ ಬ್ಯಾಳಿ, ತಿರುಪತಿ ಮಡಿವಾಳ, ಬಸವರಾಜ ಲದ್ದಿ, ಮಹೇಶ ಕೊಡಿಹಾಳ, ಮಂಜುನಾಥ ಬ್ಯಾಳಿ, ಸಿದ್ದಲಿಂಗಯ್ಯ ಸೊಪ್ಪಿಮಠ, ನಾಗರಾಜ ಯಂಬಲದ, ಬಸವರಾಜ ಬೆಲ್ಲದ ಹಾಗೂ ಇತರರು ಇದ್ದರು.
.

 

Don`t copy text!