ನೀರೆಂಬ ಅದ್ಭುತ ಔಷಧ

ನೀರೆಂಬ ಅದ್ಭುತ ಔಷಧ

ಭಗವಂತನು ದೇಹದ ನೈರ್ಮಲ್ಯಕ್ಕಾಗಿ ಸೃಷ್ಟಿಸಿರುವ ಅದ್ಭುತ ವಸ್ತು ನೀರು. ದೇಹದ ಒಳಗಿನ ಮತ್ತು ಹೊರಗಿನ ಶುಚಿತ್ವಕ್ಕೆ ನೀರು ಬೇಕೇ ಬೇಕು.

ದೇಹದ ಚಯಾಪಚಯ ಕ್ರಿಯೆ ನಡೆಯಲು ನೀರು ಪಂಚಾಮೃತವಾಗಿ ಕೆಲಸ ಮಾಡುತ್ತದೆ. ಪ್ರತಿ ದಿನ ಐದರಿಂದ ಆರು ಲೀಟರ್ ಪ್ರಮಾಣದಲ್ಲಿ ನೀರನ್ನು ಸೇವಿಸಿದ ಮನುಷ್ಯ ಆರೋಗ್ಯವಾಗಿರಬಲ್ಲನು.

ಕುದಿಸಿ ಆರಿಸಿದ ನೀರು ಕುಡಿಯಲು ಮತ್ತು ಆರೋಗ್ಯ ಹೊಂದಲು ಉತ್ತಮ. ಬೇಸಿಗೆಯಲ್ಲಿ ತಂಪಾದ ನೀರು ಕುಡಿಯುವುದು ಒಳಿತಲ್ಲ,ಯಾರು ಹೀಗೆ ಮಾಡಲು ಬಯಸುತ್ತಾರೋ ಅವರು ಇಂದಿನಿಂದ ಅಂತಹ ಕೆಲಸ ಮಾಡಬಾರದು.

ಶುದ್ಧವಾಗಿ ತೊಳೆದ ತಾಮ್ರದ ಪಾತ್ರೆಗಳಲ್ಲಿ ರಾತ್ರಿ ನೀರನ್ನು ಹಾಕಿ ಮುಚ್ಚಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹಕ್ಕೆ ಅನೇಕ ಉಪಯೋಗಗಳಿವೆ.

ಮಳೆ ಬಂದ ಸಮಯದಲ್ಲಿ ಭೂಮಿಗೆ ಬೀಳುವುದಕ್ಕಿಂತಲೂ ಮುಂಚಿತವಾಗಿ ಸಂಗ್ರಹಿಸಿದ ನೀರು ಸ್ವಾದರಹಿತವಾಗಿರುತ್ತೆ ಆದರೆ ಉದರದ ಆರೋಗ್ಯ ಸುಧಾರಣೆ ಮತ್ತು ಶುಚಿತ್ವ ಕಾಪಾಡಲು ಸಹಕರಿಸುತ್ತದೆ.
ಇಂತಹ ನೀರನ್ನು ಕುಡಿಯುವುದರಿಂದ ದೇಹ ಸದಾ ಉಲ್ಲಾಸಿತವಾಗಿರುತ್ತದೆ.

ಹೊಟ್ಟೆ ನೋವಾದಾಗ, ಬಾವು ಬಂದಾಗ, ವ್ಯಕ್ತಿ ಅರೆಪ್ರಜ್ಞಾವಸ್ಥೆಗೆ ಜಾರಿದಾಗ ನೀರು ಔಷಧದಂತೆ ಕೆಲಸ ಮಾಡುತ್ತದೆ.

ತಲೆ ತೊಳೆಯಲು ಯಾವಾಗಲೂ ತಣ್ಣೀರನ್ನು ಬಳಸಬೇಕು. ಬಿಸಿಯಾದ ನೀರಿನಿಂದ ತಲೆಕೂದಲನ್ನು ತೊಳೆದರೆ ಹೊಟ್ಟಿನ ಸಮಸ್ಯೆ ಉಂಟಾಗಿ ಕೂದಲು ಉದುರುವ ಸಾಧ್ಯತೆ ಇರುತ್ತದೆ ಅಲ್ಲದೇ ಸುಡು ನೀರು ಮೆದುಳಿಗೆ ಹಾನಿ ಮಾಡಬಹುದು.

ನಮ್ಮ ಹಿರಿಯರು ದೇಹದ ಯಾವುದೇ ಭಾಗಕ್ಕೆ ಹೊಡೆತ ಬಿದ್ದಾಗ ತೊಂಗಲು ಬಟ್ಟೆ ಕಟ್ರಿ ಎಂದು ಹೇಳುತ್ತಿದ್ದರು. ಪವಾಡವೆಂಬಂತೆ ಬೆಳಿಗ್ಗೆ ಏಳುವುದರೊಳಗಾಗಿ ಎಲ್ಲಾ ನೋವು ಮಾಯವಾಗಿ ಮೊದಲಿನಂತೆ ಕೆಲಸಕ್ಕೆ ಸಾಗುತ್ತಿದ್ದರು.ಇದು ಪವಾಡವಲ್ಲ,ಬದಲಾಗಿ ನೀರೆಂಬ ದಿವ್ಯ ಔಷಧದ ಪರಿಣಾಮವಲ್ಲದೇ ಬೇರೇನಿಲ್ಲ.
ಮುಗಿದು ಹೋಗುತ್ತಿರುವ ನೀರೆಂಬ ದಿವ್ಯ ಔಷಧದ ಬಗ್ಗೆ ಜಾಗೃತಿ ಮೂಡಿಸಿರಿ.ನೀರು ಉಳಿಸಿರಿ ಮುಂದಿನ ಪೀಳಿಗೆಗೆ ಬಳಸಲು ಸಹಕರಿಸಿರಿ.

 

 

 

 

 

 

 

 

 

 

 

 

 

ಶಂಕರ್. ಜಿ. ಬೆಟಗೇರಿ.ಲೇಖಕರು, ಉಪನ್ಯಾಸಕರು. ಹೂವಿನಹಡಗಲಿ.

Don`t copy text!