ಎಲ್ಲಿದೆ ಗುಬ್ಬಿ !?
ಪಟದಲ್ಲಿಯ ಹಕ್ಕಿಯ
ಕಂಡನು ಪುಟ್ಟು
ಯಾವುದು ಹಕ್ಕಿ ಎಂದನು
ಗುಬ್ಬಿ ಹಕ್ಕಿ ಎನ್ನಲು
ಎಲ್ಲಿದೆ ಎಂದು ಕೇಳಿದನು
ಕಾಂಕ್ರಿಟ್ ನಾಡಲಿ ಇಲ್ಲ
ಹುಡುಕಬೇಕು ನಾಡೆಲ್ಲ
ಎಂದನು ಅಪ್ಪನು
ನೋಡಲೇಬೇಕೆಂದು
ಹಠ ಹಿಡಿದನು ಪುಟ್ಟು
ತಂದೆ ತಾಯಿಗೆ ಸಂಕಟ
ಪುಟ್ಟುವಿಗೆ ಬಲು ಹಠ
ಅಡವಿಯ ತೋಟಕೆ
ಹೋದರು ಗುಬ್ಬಿಯ
ಹುಡುಕುತ ಅಲೆದರು
ಬಗೆ ಬಗೆ ಮರಗಳು
ಹಸಿರಿನ ತೋರಣವು
ವಿಧ ವಿಧ ಹಕ್ಕಿಗಳು
ಮರದಲ್ಲಿ ಕಂಡನು
ಖುಷಿಯಲಿ ಕುಣಿದನು
ಗುಬ್ಬಿಯ ಕಾಣದೆ
ಮತ್ತೆ ಹಠದಿ ಕೇಳಿದನು
ಗುಬ್ಬಿಯು ಎಲ್ಲಿದೆ?
ತೋರಿಸುವೆನೆಂದನು ಅಪ್ಪ
ಅಲೆಸಿದನು ಸುತ್ತ ಮುತ್ತ
ದೂರದಿ ಚಿಂವ್ ಚಿಂವ್
ಧ್ವನಿಯನು ಕೇಳಿ
ಪುಟ್ಟುವಿಗೆ ತೋರಿಸಿದನು
ಅದುವೇ ಚಿಂವ್ ಚಿಂವ್
ಗುಬ್ಬಿ ಎಂದನು
ಪಟದಲ್ಲಿಯ ಗುಬ್ಬಿ
ಅಡವಿಯಲ್ಲಿ ಕಂಡು
ಕುಣಿದನು ಹರುಷದಲಿ
ಗುಬ್ಬಿಯ ಹಿಡಿದು
ಕಾಂಕ್ರಿಟ್ ಕಾಡಿಗೆ
ತರಲು ಕೇಳಿದನು
ಪುಟ್ಟುವಿನ ಹಠಕ್ಕೆ
ಅಪ್ಪನು ಪೆಚ್ಚಾದನು
– ಈಶ್ವರ ಮಮದಾಪೂರ, ಗೋಕಾಕ.
9535726306