ಎಲ್ಲಿ ಹೋದಿ ಗುಬ್ಬಿ…
ಚಿಂವ್ ಚಿಂವ್ ಗುಬ್ಬಿ
ಬಾರಲೆ ಗುಬ್ಬಿ
ಫುರ್ ಫುರ್ ಎಂದು
ಹಾರುವ ಗುಬ್ಬಿ
ಕಣ್ಣಿಗೆ ಕಾಣದಂಗ್ಹ
ಎಲ್ಲಿ ಹೋದಿ
ಬೆಳಗಿನ ಜಾವಕ
ಕೀಸರು ನಿನ್ನ ಕಚೇರಿ
ಅಂಗಳದಾಗ
ಕುಣಿತ ಭಾರಿ
ಹಿಡಿಯಲು ಬಂದರೆ
ಹೋಗುವೆ ಹಾರಿ
ಅವ್ವನಿಗೆಂಥಾ ಕಾಳಜಿ
ನಿನ್ನಮ್ಯಾಲಿ
ಮೊದಲ ರೊಟ್ಟಿ
ನಿನಗ ಇಡತಾಳ
ಮ್ಯಾಳಿಗಿ ಮ್ಯಾಲಿ
ಜಂತಿಯ ಗೂಡುಗೆ
ಅವಳದೇ ಕಾವಲಿ
ಬಾಲ್ಯದ ಗೆಳತಿ ಎಲ್ಲಿರುವಿ
ಅಂಗಳಕ್ಯಾಕ ಬರವಲ್ಲಿ
ಕತಿ ಹೇಳಾಕ ಸಿಗವಲ್ಲಿ
ಸಿಟ್ಟಾಗಿಯೆನ್ ನನಮ್ಯಾಲಿ
ಜಾಗಾ ಕೊಡ್ತೀನಿ ಬಾ
ನಿನಗ ನನ್ನ ಗೂಡಲ್ಲಿ
ಒಂದಾಗಿರೋಣು ನಿನ್ನ ಹಾಡಾಲ್ಲಿ
-ಡಾ. ನಿರ್ಮಲ ಬಟ್ಟಲ