ಹಕ್ಕಿಗಳು

ಹಕ್ಕಿಗಳು

 

 

 

 

 

 

 

 

 

 

ಹಕ್ಕಿಗಳು
ಮಾತನಾಡುವುದನ್ನು ಬಿಟ್ಟಿವೆ
ಇತ್ತೀಚೆಗೆ ಅವುಗಳೆಲ್ಲ ಮೌನವಾಗಿವೆ
ಹಕ್ಕಿಗಳೂ ಆಡಿ ಹಾಡುವ ಕಾಲ ಕರಗಿದೆ
ಸೂಸುವ ಗಾಳಿ ಉಸಿರು ನಿಲ್ಲಿಸುವ ಹೊಗೆಯಾಗಿದೆ
ಕುಡಿಯುವ ನೀರು ಕರುಳು ಕತ್ತರಿಸುವ ವಿಷ ಪಾನಕವಾಗಿದೆ
ತಿನ್ನುವ ಕಾಳುಗಳೆಲ್ಲ ಹೊಟ್ಟೆ ಸೀಳುವ ಚೂರಿಗಳಾಗಿವೆ
ಹಾಗಾಗಿ
ಹಕ್ಕಿಗಳು ಮೌನವಾಗಿವೆ
ಹಾಡಬೇಕೆಂದರೂ ಕೊರಳದನಿಯ ಕೊಳಲು ಸೀಳಿಹೋಗಿದೆ
ಆದರೂ ಬದುಕುವ ಹಕ್ಕಿಗಾಗಿ
ದನಿಯ ವಾರಸುದಾರಿಕೆಗಾಗಿ
ಜಡತ್ವವನು ಚೇತನಗೊಳಿಸಬೇಕೆಂಬ
ಬಯಕೆಯಿಂದ ಮತ್ತೆ
ಹಕ್ಕಿಗಳು
ಮೌನಸೀಳಿ ಮಾತಾಡುತ್ತಲೇ
ಮಹಾಮಾರ್ಗಕೆ ಮೌನ ಸಂಕೇತವಾಗಿವೆ

 

 

 

 

 

 

 

 

 

 

 

ಡಾ. ನಾಹೀರಾ ಕುಷ್ಟಗಿ

Don`t copy text!