ತಿರುಗುತಿದೆ ಬೆಂಕಿ ಉಂಡಿ
ತಿರುಗುತಿದೆ ಬೆಂಕಿ ಉಂಡಿ,
ಹತ್ತಿಕೊಂಡ ಕಿಚ್ಚಿನಂತೆ,
ಯಾರೂ ನಂದಿಸಲಾರದು,
ಇದು ಹೋರಾಟದ
ಕಾಡ್ಗಿಚ್ಚಿನ ಜ್ವಾಲೆಯಂತೆ.
ಗಾಳಿ ಬಿಸಿಲು, ಮಳೆ
ಸುರಿಯಲಿ, ಇದು ಆರದ
ಬೆಂಕಿಯಂತೆ, ನ್ಯಾಯ ಮತ್ತು
ಸತ್ಯಕ್ಕಾಗಿ, ಬೆಳಕು ತರುತ್ತದೆ
ಬೆಳಗಿನಂತೆ!
ಕನ್ನಡದ ನೆಲ ಜಲ
ಭಾಷೆ ನುಡಿ ಕನ್ನಡ
ತಾಯ ದೇವಿಗೆ ದ್ರೋಹ
ಬಗೆದೆರೆ ಕಿಚ್ಚಾಗುವುದು
ಕರ್ನಾಟಕ
–ದೀಪಾ ಪೂಜಾರಿ ಕುಶಾಲನಗರ