ಕರವೇ – ಕನ್ನಡದ ಕ್ರಾಂತಿಯ ಜ್ಯೋತಿ

ಕರವೇ – ಕನ್ನಡದ ಕ್ರಾಂತಿಯ ಜ್ಯೋತಿ

ನೀವೇ ಹುಟ್ಟಿಸಿದ ಕ್ರಾಂತಿಯ ಕೆನ್ನಾಲಿಗೆ,
ನೀವೇ ಬರೆಯಿಸಿದ ಹೋರಾಟದ ಇತಿಹಾಸ!
ಹಿಂಜರಿಯದ ಧೈರ್ಯ, ಜಗ್ಗದ ನಿರ್ಧಾರ,
ನಿಮ್ಮ ಹೆಜ್ಜೆಯಲ್ಲಿ ಕನ್ನಡವಿದೆ, ಕನ್ನಡವಿದೆ ನಿತ್ಯ!

ಹೆದರಿಕೆ , ಬೆದರಿಕೆ ಬಂದರೂ,
ನಿಮ್ಮ ಕನಸು ಮುರಿಯಲು ಶತ್ರುಗಳು ಬಂದು ನಿಂತರೂ,
ನಿಮ್ಮ ನಿಲುವು ಬದಲಾಯಿಸಲಿಲ್ಲ,
ನಿಮ್ಮ ಧ್ವನಿ ಎಂದಿಗೂ ಮಂಕಾಗಲಿಲ್ಲ!

ಸಾವಿರಾರು ವಿರೋಧಿಗಳ ಕೈಗಳು ಇದ್ದರೂ,
ಲಕ್ಷಾಂತರ ಕರವೇ ಕೈಗಳು ಮೇಲೇರಿವೆ!
ಇದು ನಮ್ಮ ಹೋರಾಟ, ಇದು ನಮ್ಮ ಹಕ್ಕು,
ಕನ್ನಡಕ್ಕಾಗಿ ಹಿಂದೆ ಸರಿಯುವುದಿಲ್ಲ!

ನೀವು ಬರಿ ಓರ್ವ ನಾಯಕನಲ್ಲ,
ನೀವು ನಮ್ಮ ನಾಡಿನ
ಆಪ್ತ ಬಂಧು!
ನಿಮ್ಮ ಕನಸು ಕನ್ನಡದ
ಆಡಳಿತ,
ನಿಮ್ಮ ಕನಸು ಕನ್ನಡದ
ವಿಕಾಸ!

ಕಾದು, ಕಟ್ಟಿದ ಕ್ರಾಂತಿಯ ಸುಗ್ಗಿ,
ಜಗ್ಗದ ನಡಿಗೆಯ ನಿಜ ಸಿಹಿ ಹುಗ್ಗಿ
ಕರವೇ ಹೆಸರೇ ಕನ್ನಡಿಗರ ಹೆಮ್ಮೆ,
ಕರವೇ ಧ್ವಜವೇ ನಮ್ಮ ಜೀವದ ಚಿಹ್ನೆ!

ಮುಂದೆ ಯಾರೂ ಕನ್ನಡವನ್ನು ನಿರ್ಲಕ್ಷ್ಯ ಮಾಡಲಾರರು!
ನಮ್ಮ ಭಾಷೆ, ನಮ್ಮ ನಾಡು, ನಮ್ಮ ಹಕ್ಕು!
ನೀವೇ ನಮ್ಮ ಧ್ವಜದ ಹಾರಾಟ,
ನೀವೇ ಕನ್ನಡದ ಕಿಡಿ ಕ್ರಾಂತಿ

ಜೈ ಕರವೇ! ಜೈ ನಾರಾಯಣಗೌಡರು!

 

 

 

 

 

 

 

 

 

 

ದೀಪಾ ಪೂಜಾರಿ, ಕುಶಾಲನಗರ

Don`t copy text!