ಗಜಲ್
ನಿದ್ದೆಗೆಡುವ ನಿದ್ದೆಗೆಡಿಸುವ ರೂಢಿ ಆಗಲಿ ನಿನಗೆ
ಈ ಕವಯಿತ್ರಿಯ ಪ್ರೀತಿಸುವ ರೂಢಿ ಆಗಲಿ ನಿನಗೆ
ನಾವು ಅಷ್ಟು ದಿನದಿಂದ ದೂರದಲ್ಲಿದ್ದು ಅನುಭವಿಸಿದ್ದು ಸಾಕಿನ್ನು
ದೂರವನ್ನು ದೂರದಲ್ಲಿಟ್ಟು ಸಮೀಪಿಸುವ ರೂಢಿ ಆಗಲಿ ನಿನಗೆ
ನಂಬಿದ ತಾರೆಗಳೆಲ್ಲವೂ ಕತ್ತಲೆ ಕವಿದವು ಭೂತಮಯವಾಗಿ
ಚಂದ್ರನಾಗಿ ಭವಿಷ್ಯ ಬೆಳಗಿಸುವ ರೂಢಿಯಾಗಲಿ ನಿನಗೆ
ಬರೀ ಚುಚ್ಚುತ ಸಾಗಿ ನೋವು ಕಂಡಿದ್ದೆ ಆಯ್ತು ಜೀವನವೆಲ್ಲ
ಸೂಜಿಗೆ ಪೋಣಿಸಿದ ಧಾರವಾಗಿ ಜೋಡಿಸುವ ರೂಢಿ ಆಗಲಿ ನಿನಗೆ
ಹರವಿ ಹೋಗುತ್ತಿದೆ ಜ್ಯೋತಿ ನನ್ನ ಗೋರಿಗೆ ಏರಿಸಿದ ಉಪ್ಪರಿಗೆ ಮಣ್ಣು
ಆಗಾಗ ನೆರಳನ್ನಾದರೂ ಸೂಕಿಸು ಗರಿಕೆ ಚಿಗುರಿಸುವ ರೂಢಿಯಾಗಲಿ ನಿನಗೆ
ಜ್ಯೋತಿ ಮಾಳಿ ಬೆಳಗಾವಿ