ಮಸ್ಕಿ ಉಪ ಖಜಾನೆ ಕಚೇರಿ ಉದ್ಘಾಟನೆ

e-ಸುದ್ದಿ, ಮಸ್ಕಿ

ನೂತನ ತಾಲೂಕು ಕೇಂದ್ರವಾದ ಮಸ್ಕಿಯಲ್ಲಿ ಉಪ ಖಜಾನೆ ಕಚೇರಿಯನ್ನು ಜಿಲ್ಲಾ ಖಜಾನೆ ಅಧಿಕಾರಿ ಹರಿನಾಥ ಬಾಬು ಬುಧವಾರ ಉದ್ಘಾಟಸಿದರು.
ತಾಲೂಕು ಕೇಂದ್ರವಾಗಿ ಎರಡು ವರ್ಷ ಗತಿಸಿದ್ದರು ಉಪ ಖಾಜನೆ ಕಚೇರಿ ನೆನೆಗುದಿಗೆ ಬಿದಿತ್ತು. ಸರ್ಕಾರ ಎರಡು ತಿಂಗಳ ಹಿಂದೆ ಹೊಸ ಖಜಾನೆ ಆರಂಭಕ್ಕೆ ಅನುಮತಿ ನೀಡಿತ್ತು. ಪಟ್ಟಣದ ಮುಖ್ಯ ಬೀದಿಯಲ್ಲಿ ಶರಣಬಸವೇಶ್ವರ ಚಿತ್ರಮಂದಿರದ ಹತ್ತಿರ ಹೊಸ ಖಜಾನೆ ಇಲಾಖೆಯ ಕಚೇರಿಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಖಜಾನೆ ಅಧಿಕಾರಿ ಹರಿನಾಥ ಬಾಬು ಹೇಳಿದರು.
ಮಾಜಿ ಶಾಸಕ ಪ್ರತಪಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಬಸನಗೌಡ ಪಾಟೀಲ, ಉದ್ಯಮಿ ಅಂದಾನಪ್ಪ ಗುಂಡಳ್ಳಿ, ಬಸವಂತರಾಯ ಕುರಿ, ಉಪ ಖಜಾನೆ ಅಧಿಕಾರಿಗಳಾದ ಶರಣಬಸವ ಕರಡಕಲ್, ನಾಗರಾಜ ನಾಯಕ ಸೇರಿದಂತೆ ಅನೇಕ ಮುಖಂಡರು ಇದ್ದರು.

Don`t copy text!