ರಕ್ತ ಕಾರ್ಖನೆಯಲ್ಲಿ ಉತ್ಪದಾನೆ ಆಗಲ್ಲ ಮನುಷ್ಯನ ದೇಹದಲಲ್ಲಿ ಉತ್ಪಾದನೆ ಸಾಧ್ಯ- ಡಾ.ದೌಲಸಾಬ ಮುದ್ದಾಪುರ

e-ಸುದ್ದಿ, ಮಸ್ಕಿ
ರಕ್ತವನ್ನು ಕಾರ್ಖನೆಯಲ್ಲಿ ಉತ್ಪಾದಿಸಲು ಬರುವುದಿಲ್ಲ. ಅದು ಮನುಷ್ಯನ ದೇಹದಲ್ಲಿ ಮಾತ್ರ ಉತ್ಪಾದನೆಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಆರೋಗ್ಯವಂತರು ರಕ್ತವನ್ನು ದಾನ ಮಾಡುವ ಮೂಲಕ ಅದರ ಅವಶ್ಯಕತೆ ಇದ್ದವರಿಗೆ ಕೊಡುವದು ಪುಣ್ಯದ ಕೆಲಸ ಎಂದು ಬಳಗಾನೂರು ಪ್ರಾಥಮಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೌಲಸಾಬ ಮುದ್ದಾಪುರ ಹೇಳಿದರು.
ತಾಲೂಕಿನ ಬಳಗಾನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ರೈತ ದಿನಾಚರಣೆ ಅಂಗವಾಗಿ ಸುಂಕನೂರು ದುರುಗನಗೌಡ ಪೊಲೀಸ್ ಪಾಟೀಲ್ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ರೀಮ್ಸ್ ಬ್ಲಡ್ ಬ್ಯಾಂಕ್ ರಾಯಚೂರು, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರು ಜಂಟಿಯಾಗಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ನಿಂಗಣ್ಣ ತಾತ ಪೂಜಾರ, ಗೋನಾಳ ಮಲ್ಲಯ್ಯತಾತ ಪೂಜಾರ ಸಸಿಗೆ ನೀರು ಹಾಕುವುದರ ಮೂಲಕ ಚಾಲನೇ ನೀಡಿದರು.
ರೀಮ್ಸ್ ಬ್ಲಡ್ ಬ್ಯಾಂಕ್‍ನ ಡಾ.ಅಹ್ಮದ್‍ಹುಸೇನ್, ಪಪಂ ಅಧ್ಯಕ್ಷ ನೂರಜಹಾನ್ ಬೇಗಂ, ಉಪಾಧ್ಯಕ್ಷರಾದ ಮಂಜುನಾಥ ಕರಡಕಲ್, ಕಾರ್ಯಕ್ರಮ ಆಯೋಜಕರಾದ ಮಲ್ಲನಗೌಡ ಸುಂಕನೂರು, ವಿಜಯಪಾಟೀಲ್, ಸಂಸ್ಥೆಯ ಸದಸ್ಯರಾದ ನಾಗರಾಜ ಕಟ್ಟಿಮನಿ, ವೀರೇಶ ಹವಾಲ್ದಾರ, ಜಗದೀಶ ಬಂಗ್ಗಿ ದೇವನಗೌಡ ಪಾಟೀಲ್ ಶಶಿಕುಮಾರ ಹೆಂಬಾ, ಸಿದ್ದು ಸಳ್ಳೇದ ಬಸವರಾಜ ಗುರಿಕಾರ, ಸಿದ್ದು ಕುರಿ ಇದ್ದರು. 30 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡುವುದರ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು.

Don`t copy text!