ನಿನ್ನ ನೆರಳೆ ನಿನಗೆ ಸಾಕು

ನಿನ್ನ ನೆರಳೆ ನಿನಗೆ ಸಾಕು

 

 

 

 

 

 

 

 

 

 

ಯಾರನ್ನೂ ನಂಬಿ ಮೋಸ ಹೋಗಬೇಡ,
ನಿನ್ನ ನೆರಳೇ ನಿನಗೆ ಸಾಕು…
ನೀನೇ ನಿನ್ನ ಬಾಳಿನ ದಾರಿ,
ನಿನ್ನ ನಂಬಿಕೆಯಾಗಲಿ ಬೆಳಕು…

ನಗುವ ಹಿಂದೆ ಏನೆಂಬುದು ಅರಿಯಲು ಸಾಧ್ಯವೋ?
ಹೃದಯದೊಳಗೇ ನೋವಿನ ನೆರಳು ಬೀರುವೋ…
ನಿನ್ನ ನಂಬಿಕೆ ಸದಾ ನಿನ್ನ ಬಳಿಯಿರಲಿ,
ನಿನ್ನ ಹಾದಿಯ ಬೆಳಕಾಗಿರಲಿ…

ಹಾಸುಹೊತ್ತು ಹಂಚಿದ ಮಾತು,
ಮೋಸದ ಬಲೆಗೂ ಸಿಕ್ಕದಿರು…
ಬೇಸರ ಬೇಡ, ನಿನ್ನ ವಿಶ್ವಾಸ,
ನೀನೇ ನಿನಗೆ ದೀಪವಾಗಿರು…

ಬಾಳಿ ಬಂದವರ ಬಣ್ಣ ಬದಲಾಗಲಿ,
ನಿನ್ನ ನೆನಪು ಮಾತ್ರ ಸದಾ ಉಳಿಯಲಿ…
ಜಗದ ಗಾಳಿ ಹೇಗೆ ಬೀಸಿದರೂ,
ನಿನ್ನ ಹೆಜ್ಜೆ ಸದಾ ದೃಢವಾಗಿರಲಿ…

 

 

 

 

 

 

 

 

 

ದೀಪಾ ಪೂಜಾರಿ ಕುಶಾಲನಗರ

Don`t copy text!