ಪರಮ ಪವಿತ್ರ ರಂಜಾನ್
( ಇಸ್ಲಾಂನ ಪಂಚಶೀಲ ತತ್ವಗಳು)
ಇಸ್ಲಾಂ ಎಂದರೆ ಅನುಸರಣೆ
ಕುರ್-ಆನ್ ನಮಗೆಲ್ಲ ಪ್ರೇರಣೆ
ನಿತ್ಯ ನಿರಾಕಾರ ಸೃಷ್ಟಿಕರ್ತನ ಪ್ರಾರ್ಥನೆ
ತ್ಯಾಗ ಬಲಿದಾನವೇ ಮುಸಲ್ಮಾನರ ಧೋರಣೆ
ಝೋಹರನ ಅದಾನ್ ವೇ ಮನ: ಪರೀಕ್ಷರಣೆ
ನಿತ್ಯವೂ ನಮ್ಮಲ್ಲಾಗಬೇಕು ಸುಧಾರಣೆ
ನೈತಿಕ ಪರಿಶುದ್ಧತೆ,ಸತ್ಕರ್ಮಗಳಿಗೆ ಉಪವಾಸ
ವರ್ಷಕ್ಕೊಮ್ಮೆ ಮಾಸ ಪೂರ್ತಿ ಕಠಿಣ ಉಪವಾಸ
ನಿತ್ಯವಿರಬೇಕು ಸಾರ ಸಜ್ಜನರ ಸಹವಾಸ
ಮಾನವ ಕುಲವೊಂದೇ ಎನ್ನುವ ಆತ್ಮವಿಶ್ವಾಸ
ಧನಿಕನಿರಲಿ ತಿರುಕನಿರಲಿ ಹಂಚಿ ಉಣ್ಣಬೇಕು
ಸತ್ಯ ಶುದ್ಧ ಕಾಯಕದ ಧನ ಕನಕ ದಾನ ನೀಡಬೇಕು
ಝಕಾತ್ ಇಬಾದತ್ ನ ತಾತ್ಪರ್ಯ ಅರಿತಿರಬೇಕು
ಧನ ಪೂಜೆ, ಸಂಕುಚಿತ ಮನಸ್ಸು ತೊರದಿರಬೇಕು
ಜೀವನದಲ್ಲೊಮ್ಮೆ ಪ್ರವಾದಿಗಳ ದರ್ಶನ
ಮೆಕ್ಕಾ ತಂದೆ ಮದೀನಾ ತಾಯಿ ಇದೇ ಜೀವನ
ದೇಹದಿಚ್ಛೆ ತೊರೆದು ಸಾಗಬೇಕು ಪ್ರಯಾಣ
ಕಂಗಳ ತುಂಬಿಸಲು ಮುಸ್ಲಿಮರ ಸಮ್ಮೇಳನ
ದುರ್ವರ್ತನೆ ದುರಾಚಾರ ಅಲ್ಲಾಹನಿಗೆ ಅಪ್ರೀಯ
ಎಲ್ಲರಲ್ಲೂ ಕಾಣಬೇಕು ಸಹಾನುಭೂತಿಯ
ವಿಶ್ವ ಭ್ರಾತೃತ್ವ ಸಾರುವ ಸಂದೇಶ ಮುಖ್ಯ ಧ್ಯೇಯ
ಒಂದಾಗಿ ಬಾಳೋಣ ಬಂದಿದೆ ಈಗ ಸಮಯ
(ನಮಾಝ್, ಉಪವಾಸ, ಝಕಾತ್,ಹಜ್ಜ್,ಇಸ್ಲಾಮಿನ ಸೇವೆ)
-ರವೀಂದ್ರ ಆರ್ ಪಟ್ಟಣ
ಮುಳಗುಂದ —– ರಾಮದುರ್ಗ
9481931842