ಬಿ.ಮಲ್ಲೇಶ ಬಳಗಾನೂರಗೆ ಗೌರವ ಡಾಕ್ಟರೇಟ್ ಪದವಿ

e-ಸುದ್ದಿ, ಮಸ್ಕಿ
ಬೆಂಗಳೂರು ಉತ್ತರ ವಲಯದ 3 ರ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಮಲ್ಲೇಶ ಬಳಗಾನೂರು ಅವರಿಗೆ ಇತ್ತೀಚಿಗೆ ಬೆಂಗಳೂರಿನಲ್ಲಿ ಡಿ.19 ರಂದು ಬೆಂಗಳೂರು ಯುನಿವರ್ಸಲ್ ಡೆವಲೇಪ್‍ಮೆಂಟ್ ಕೌನ್ಸಿಲ್ ವತಿಯಿಂದ ಸಾಮಾಜಿಕ ಸೇವೆ ಮತ್ತು ಶೈಕ್ಷಣಿಕ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಎಂದು ದಲಿತ ಸಂರಕ್ಷ ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಿ.ಮೌನೇಶ ಬಳಗಾನೂರು ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪ್ರೌಢ ಶಾಲೆ ಶಿಕ್ಷಕರಾಗಿ ಸೇವೆಯಲ್ಲಿರುವ ಅವರಿಗೆ ಬೆಂಗಳೂರು ಯುನಿವರ್ಸಲ್ ಡೆವಲೇಪ್‍ಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ಗೌರವ ಸಿಕ್ಕಂತಗಿದೆ ಎಂದರು.
ದಲಿತ ಸಂರಕ್ಷ ಜಿಲ್ಲಾ ಸಮಿತಿ ಹಾಗೂ ತಾಲ್ಲೂಕಾ ಸಮಿತಿಯಿಂದ ಅಭಿನಂದಿಸಿದರು. ಉಪಾಧ್ಯಕ್ಷ ಭೀೀಮರಾಯ ಸೇರಿದಂತೆ ಮತ್ತಿತರು ಇದ್ದರು.

Don`t copy text!