ಗಜಲ್

 

ಗಜಲ್

ನೀರಿಗಿಂತ ರಕ್ತ ಕುಡಿದೇ ಇಲ್ಲಿ ಹಸಿರಾಗಿದೆ
ಸ್ವರ್ಗಕ್ಕಿಂತಲೂ ನರಕಕೇ ಇಲ್ಲಿ ಹೆಸರಾಗಿದೆ

ಜಿಹಾದ ಎಂಬ ಪದದ ಅರ್ಥವೇ ಗೊಂದಲ
ಮಾರಣ ಹೋಮಕೆಂದೇ ಇಲ್ಲಿ ನಾಕವಾಗಿದೆ

ಭಯವೇ ಯಾವತ್ತೂ ಧರ್ಮದ ಮೂಲಮಂತ್ರ
ದಯೆಯೇ ಅಪರಿಚಿತವಾಗಿ ಇಲ್ಲಿ ಮಾಯವಾಗಿದೆ

ಪುಲ್ವಾಮವೋ ಪಹಲ್ಗಾವವೋ ಭೇದವಿಲ್ಲ ಬಿಡು
ಬಂದೂಕಿನೊಳಗಿನ ಗುಂಡು ಇಲ್ಲಿ ಬೀಜವಾಗಿದೆ

ಅಲ್ಲಾಹು ಮೆಚ್ಚಿ ದೇವರು ಒಲಿಯುತ್ತಾನೆ ‘ಕಾಂತಾ’
ಬಾಳು ಹೆಣವಾಗುವದಕೇ ಸದಾ ಇಲ್ಲಿ ಸಗ್ಗವಾಗಿದೆ

 

 

 

 

 

 

 

 

 

 

ಕೆ.ಶಶಿಕಾಂತ
ಲಿಂಗಸೂಗೂರ

Don`t copy text!