ಕ್ರಾಂತಿ ಸೂರ್ಯ.
ನುಡಿಗಳಿಗೆ ಮುತ್ತು ಪೋಣಿಸಿ
ನಡೆ ನುಡಿಗೆ ದಿಕ್ಸೂಚಿ ನೀ ಬಸವಾ
ಮುಗಿಲ ಮರೆಯ ಮಿಂಚಿನಂತೆ
ಒಡಲ ಮರೆಯ ಆತ್ಮನಂತೆ
ಮನುಕುಲದ ಗುರು ನೀ ಬಸವಾ
ಜಾತಿಯ ತೊರೆದು ಜೋತಿಯಾಗಿ
ದೀನದಲಿತರಿಗೆ ಆಶಾಕಿರಣ ನೀ ಬಸವಾ
ಸೂರ್ಯನುದಯ ತಾವರೆಗೆ ಜೀವಾಳ
ನಿಮ್ಮ ವಚನಗಳೆ ಮನುಕುಲಕೆ ಜೀವಾಳ ಬಸವಾ
ಮನಕೆ ಮಿಡಿಯುತದೆ ವಚನ ,ವಚನಕ್ಕೆ ಮಿಡಿಯುತಿದೆ ಮನ
ಮನ ಮುಟ್ಟುವ ಭಕ್ತಿಗೆ ತನು ಅರ್ಪಿಸಿದೆ ನೀ ಬಸವಾ
ಮಾಡುವ ನೀಡುವ ನಿಜ ಭಕ್ತನ ಮನದಲಿ
ನೀ ನೆಲೆಸಿರುವೆ ಬಸವಾ
ಲೋಕದ ಡೊಂಕು ತಿದ್ದದೆ ನಿನ್ನನೇ ನೀ
ತಿದ್ದಿಕೊಂಡು ಮಾವಿನಕಾಯಿಯೊಳಗೊಂದ ಎಕ್ಕೆಯ ಕಾಯಿ ನೀ ಎಂದೆ ಬಸವಾ
ಬಸವನೆಂಬ ಬಳ್ಳಿಗೆ ಶರಣು ಸಂಕುಲವೆಂಬ ಹೂ ಮೊಗ್ಗು ಎಲೆ ಅರಳಿ ಮಹಾವ್ರೃಕ್ಷ ವಾಗಲು ಕಾರಣ ನೀ ಬಸವಾ
ಮನ ಮುಟ್ಟಿದ ಭಕ್ತಿಗೆ ತನುಅರ್ಪಸಿ
ದೇಹವೇ ದೇಗುಲ ಮಾಡಿ
ಕೂಡಲನ ಸಂಗದಲಿ ನೀ ಕೂಡಿದೆ ಬಸವಾ
ವಿಶ್ವ ಶಾಂತಿಗೆ ವಿಶ್ವ ರೂಪವಾದ ನಿಮ್ಮ
ವಚನಗಳೆ ಕ್ರಾಂತಿ ಸೂರ್ಯ ಬಸವಾ.
–ಲಲಿತಾ ಪ್ರಭು ಅಂಗಡಿ
ಮುಂಬಯಿ.