ನನ್ನ ಮಗಳು ನನಗೆ ಹೆಮ್ಮೆ

ನನ್ನ ಮಗಳು ನನಗೆ ಹೆಮ್ಮೆ


ನಗು ಬಲು ಅಕ್ಕರೆ
ಹಸು ಗುಸು ಮುದ್ದು
ಬೆಣ್ಣೆಯ ಮುದ್ದೆ
ಹೆತ್ತ ಕರುಳಿನ ನೋವು
ಮರೆಮಾಚಿದ ನೋಟ
ಸಕ್ಕರೆಯ ಗೊಂಬೆ
ಏನು ಅರಿಯದ ಮುಗ್ದೆ
ಬೆಳೆಯುತ್ತಾ ಜಾಣೆ
ಅವಳಷ್ಟಕ್ಕ ಅವಳು
ಸೌಂದರ್ಯದ ಖನಿ
ಓದು ,ಕಲೆ ಇಷ್ಟ
ಮಿತ ಭಾಷಿ, ಸಂಗೀತ ಪ್ರಿಯ
ನೇರ ನಡೆ ನುಡಿ
ಮಾತು ಮೌನ ದಿಟ್ಟ
ಸಾಧಿಸಿದ ಛಲಗಾತಿ
ಅಂದು ಮಾಗ್ದೆ,ಇಂದು ದಿಟ್ಟ
ಪಟ್ಟಣದಲ್ಲಿ ಬೆಳೆದು
ಮಹಾನಗರ ಕಾಯಕ
ಪ್ರಾಮಾಣಿಕ,ದ್ಯೈರ್ಯ,ನಿಷ್ಠುರ
ಮಗಳೆಂದರೆ ಹೆಮ್ಮೆ
ಏರಿತು ಆಶಾ ಗೋಪುರ
ಈಜಿತು ಸಾಗರ
ಅವಳು ಅಮೃತ ಧಾರೆ
ದೇಶ,ವಿದೇಶಿ ನಂಟು
ಆಯುರ್ವೇದ ತಜ್ಞೆ
ಕಾಯಕದಿ ಯೋಗಿ
ಮನ ಮುಟ್ಟುವ ಮಾತು
ಗಮನವೆಲ್ಲ ಕಾಯಕ
ಅವಳೇ ಮುದ್ದಿನ ಪುತ್ರಿ
ನನ್ನ ಮಗಳು ನನಗೆ ಹೆಮ್ಮೆ.

ವಿಜಯಲಕ್ಷ್ಮಿ ಹಂಗರಗಿ ಶಹಾಪುರ

Don`t copy text!