ಮಸ್ಕಿ ತಾಲೂಕಿನಲ್ಲಿ ಶಾಂತಿಯುತ ಶೇ.79.01 ಮತದಾನ

 

e-ಸುದ್ದಿ, ಮಸ್ಕಿ

ತಾಲೂಕಿನ ಎರಡನೇ ಹಂತದ ಗ್ರಾ.ಪಂ.ಚುನಾವಣೆ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ತಾಲೂಕಿನ 17 ಗ್ರಾಮ ಪಂಚಾಯತಿಗಳ 327 ಸ್ಥಾನಗಳಿಗೆ ಮತದಾನ ನಡೆಯಿತು.
ಶಾಂತಿಯುತವಾಗಿ ಮತದಾನ ನಡೆದಿದ್ದು, ಪ್ರತಿಯೊಂದು ಗ್ರಾ.ಪಂ.ನಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖೆಯಲ್ಲಿ ಮತದಾನ ಮಾಡಿದ್ದು ಕಂಡುಬಂದಿದೆ. ಕೆಲ ಕಡೆ ಮಾತಿ ಚಕಮಕಿ ಹೊರತು ಪಡಿಸಿ, ಬಹುತೇಕ ಶಾಂತಿಯುತವಾಗಿ ಚುನಾವಣೆ ಪೂರ್ಣಗೊಂಡಿದೆ.
ತಾಲೂಕಿನ ಒಟ್ಟು 17 ಗ್ರಾ.ಪಂಗಳಲ್ಲಿ ಶೇ.79.01 ರಷ್ಟು ಮತದಾನವಾಗಿದೆ.
ಬೆಳಿಗ್ಗೆ ಚಳಿಯಿಂದಾಗಿ ಮತದಾರರು ಮತಗಟ್ಟೆಗೆ ಬರಲು ಹಿಂದೇಟು ಹಾಕಿದ್ದರು. 7 ಗಂಟೆಯಿಂದ ಶುರುವಾದ ಮತದಾನ 9 ಗಂಟೆವರೆಗೂ ನೀರಸವಾಗಿತ್ತು. ಮೈಕೊರೆವ ಚಳಿಯಿಂದಾಗಿ ಬಿಸಿಲೇರುವ ತನಕ ಮತದಾರರು ಮತಗಟ್ಟೆಗಳತ್ತ ಸುಳಿಯಲಿಲ್ಲ. 9 ಗಂಟೆ ನಂತರ ಚುರುಕುಗೊಂಡ ಮತದಾನ 1 ಗಂಟೆಗೆ ವೇಳೆ ಶೇ 40 ರಷ್ಟು ಮತದಾನ ಮುಗಿದಿತ್ತು.
ಬಹುತೇಕ ಎಲ್ಲ ಗ್ರಾಮಗಳಲ್ಲೂ ಬೆಳಿಗ್ಗೆ ತುರುಸಿನ ಮತದಾನ ಕಂಡುಬರಲಿಲ್ಲ. ಮತಗಟ್ಟೆ ಬಳಿಯಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿತರು ಬಹಳಷ್ಟು ಸಂಖ್ಯೆಯಲ್ಲಿ ನೆರೆದು, ಮತದಾರರ ಗಮನ ಸೆಳೆಯುವುದು ಸಹಜವಾಗಿತ್ತು.

 

ಗ್ರಾ.ಪಂ  ಚುನಾವಣೆ ಪಕ್ಷ ರಹಿತವಾಗಿದ್ದರೂ ಎಲ್ಲೆಡೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಓಡಾಟ ಬಿರುಸಾಗಿತು. ತಮ್ಮ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಉಭಯ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಗಳ ಅಸುಪಾಸಿನಲ್ಲಿ ಮತ ಸೆಳೆಯಲು ನಾನಾ ಕಸರತ್ತಿನಲ್ಲಿ ತೊಡಗಿರುವದು ಕಂಡುಬಂತು.

ಕರೊನಾ ನಿಯಮ ಪಾಲನೆ: ಕರೊನಾ ಹಿನ್ನಲೆಯಲ್ಲಿ ನಿಯಮಾನುಸಾರ ಮತದಾನ ನಡೆಸಲಾಯಿತು. ಮತಗಟ್ಟೆಗೆ ಬಂದ ಮತದಾರರು ಮಾಸ್ಕ್ ಧರಿಸಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಂಡು ನಂತರ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುತ್ತಿತ್ತು. ನಂತರ ಸ್ಯಾನಿಟೈಜರ್ ನೀಡಿ ಮತಗಟ್ಟೆ ಒಳಗೆ ಕಳುಹಿಸುತ್ತಿದ್ದರು.
ಮಹಿಳೆಯರ ವಿಶೇಷತೆ ಃ ತಲೇಖಾನ ಗ್ರಾಮದಲ್ಲಿ ಮಹಿಳೆಯರು ಶಿಸ್ತುಬದ್ಧವಾಗಿ ಮಾಸ್ಕ್ ಧರಿಸಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು. ಅಂತರಗಂಗಿಯಲ್ಲಿ ವಿಲ್ಹ ಚೇರ್ ಇರಲಿಲ್ಲವಾಧ್ದರಿಂದ ಗಂಗಮ್ಮ(85) ಎಂಬ ವೃದ್ಧೆಯನ್ನು ಮತಗಟ್ಟೆಗೆ ಎತ್ತಿಕೊಂಡು ಬಂದು ಮತಚಲಾಯಿಸಿದರು.

Don`t copy text!