ಆರೋಗ್ಯ ಪೌಷ್ಠಿಕತೆ ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ತಾ.ಪಂ. ಇಒಗೆ ಪ್ರಶಸ್ತಿ ಪ್ರಧಾನ

ಆರೋಗ್ಯ ಪೌಷ್ಠಿಕತೆ ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ತಾ.ಪಂ. ಇಒಗೆ ಪ್ರಶಸ್ತಿ ಪ್ರಧಾನ

e- ಸುದ್ದಿ ಮಸ್ಕಿ

ಕೇಂದ್ರ ಸರ್ಕಾರದ ಮಹತ್ವ ಕಾಂಕ್ಷೆ ತಾಲ್ಲೂಕು ಕಾರ್ಯಕ್ರಮ (ಎಬಿಪಿ)ದಲ್ಲು ಎರಡನೇ ಬಾರಿಗೆ ಮಸ್ಕಿ ತಾಲ್ಲೂಕು ದಕ್ಷಿಣ ಭಾರತ ವಲಯದ ಪ್ರಶಸ್ತಿಗೆ ಆಯ್ಕೆಯಾಗಿದೆ.
ಸಂರ್ಪೂಣತಾ ಅಭಿಯಾನದಡಿ ಕೃಷಿ, ಪೌಷ್ಠಿಕತೆ, ವೈದ್ಯಕೀಯ, ಸ್ವ ಸಹಾಯ ಸಂಘಗಳಿಗೆ ಪ್ರೋತ್ಸಾಹ ಈ ನಾಲ್ಕು ಮಾನದಂಡಗಳಿಗೆ ಅನುಗುಣವಾಗಿ ಮಸ್ಕಿ ತಾಲ್ಲೂಕಿಗೆ ಎರಡನೇ ಬಾರಿಗೆ ಪ್ರಶಸ್ತಿ ಒಲಿದು ಬಂದಿದೆ.

೨೦೨೪ ರ ಡಿಸೆಂಬರ ೨೪ ರಂದು ಪ್ರಕಟಿಸಿದ ನೀತಿ ಆಯೋಗದ ಮಾನದಂಡಗಳ ಅಭಿವೃದ್ದಿ ಸೂಚ್ಯಂಕದಲ್ಲಿ ದಕ್ಷಿಣ ಭಾರತದ (ಝೋನ್) ರ ಮೌಲ್ಯಮಾಪನದಲ್ಲಿ ತಾಲ್ಲೂಕು ಪ್ರಥಮ ಶ್ರೇಣಿ ಪಡೆದಿಕೊಂಡಿದೆ.

ಹಿಂದುಳಿದ ಜಿಲ್ಲೆಗಳ ಅಭಿವೃದ್ದಿಗೆ ನೀತಿ ಆಯೋಗ ದೇಶದ ನಾನಾ ರಾಜ್ಯಗಳ ಜಿಲ್ಲೆಗಳನ್ನು ಮಹತ್ವಕಾಂಕ್ಷಿ ಜಿಲ್ಲೆ ಯೋಜನೆಯಡಿ ಆರು ವಲಯಗಳಲ್ಲಿ ೪೦ ಬಗೆಯ ವಿವಿಧ ಅಭಿವೃದ್ದಿ ಸೂಚಿಗಳನ್ನು ಪೂರೈಸಲು ಯೋಜನೆ ರೂಪಿಸಿದೆ. ಅದೇ ರೀತಿ ಹಿಂದುಳಿದ ತಾಲ್ಲೂಕು ಅಭಿವೃದ್ದಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಮಹತ್ವಕಾಂಕ್ಷಿ ತಾಲ್ಲೂಕು ಕಾರ್ಯಕ್ರಮ (ಎಬಿಪಿ) ಕಾರ್ಯಕ್ರಮಕ್ಕೆ ಚಾಲನೇ ನೀಡಿದ್ದರು. ಸದರಿ ಕಾರ್ಯಕ್ರಮದಡಿ ಕಳೆದ ವರ್ಷ ಸೆಪ್ಟಂಬರ್ ಅಕ್ಟೋಬರ್, ನವೆಂಬರ ತಿಂಗಳಲ್ಲಿ ಸಂರ್ಪೂಣತಾ ಅಭಿಯಾನ ಕಾರ್ಯಕ್ರಮ ಅನುಷ್ಠಾನದ ಮುಂಚುಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಪಂಚಾಯತಿಗೆ ಒಂದು ಕೋಟಿ ರೂ ಮೊತ್ತದ ಪ್ರಶಸ್ತಿ ಘೋಷಿಸಿದೆ.
ಮಸ್ಕಿ ತಾಲ್ಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಮತ್ತು ಮುಂಚೂಣಿ ಸಿಬ್ಬಂದಿಗೆ ರಾಯಚೂರು ಜಿ.ಪಂ.ಸಭಾoಗಣದಲ್ಲಿ ಶನಿವಾರ ಜರುಗಿದ ಸಂಪೂರ್ಣತಾ ಸಮಾರೋಪ ಸಮಾರಂಭದಲ್ಲಿ ಜಿ.ಪಂ.ಸಿಇಒ ಈಶ್ವರಕಾಂದೂ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಈ ವೇಳೆ ಪಂಚಾಯತಿ ಅಭೀವೃದ್ದಿ ಅಧಿಕಾರಿಗಳಾದ ತಿಮ್ಮನಗೌಡ ಶಾಂತಪ್ಪ, ಪ್ರಕಾಶ ಹಾಗೂ ಇತರರು ಇದ್ದರು.
ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಜಿ.ಪಂ.ಯೋಜನಾಧಿಕಾರಿ ಡಾ.ಟಿ.ರೋಣಿ,ಅಪರ ಜಿಲ್ಲಾಧಿಕಾರಿ ಶಿವಪ್ಪ ಭಜಂತ್ರಿ, ಯೋಜನಾ ನಿರ್ದೆಶಕರಾದ ಶರಣಬಸವರಾಜ, ಮಹಾನಗರ ಪಾಲಿಕೆ ಅಧ್ಯಕ್ಷ ಸಾಜೀದ್ ಸಮೀರ್, ಡಿ.ಎಚ್.ಒ ಡಾ.ಸುರೇಂದ್ರಬಾಬು ಹಾಗೂ ಇತರರು ಇದ್ದರು.

Don`t copy text!