ಕುವೆಂಪು ತತ್ವಾದರ್ಶಗಳ ಪಾಲನೆ ಅವಶ್ಯ

ರಾಷ್ಟ್ರಕವಿ ಕುವೆಂಪು 116ನೇ ಜನ್ಮ ದಿನಾಚರಣೆ, ಕವಿಗೋಷ್ಠಿ
ಕುವೆಂಪು ತತ್ವಾದರ್ಶಗಳ ಪಾಲನೆ ಅವಶ್ಯ

e-ಸುದ್ದಿ ಮಾನ್ವಿ:

‘ವಿಶ್ವಮಾನವ ಸಂದೇಶ ಪ್ರತಿಪಾದಿಸಿದ ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸುವುದು ಅವಶ್ಯ’ ಎಂದು ಪುರುಸಭೆಯ ಸದಸ್ಯ ರಾಜಾ ಮಹೇಂದ್ರ ನಾಯಕ ಹೇಳಿದರು.
ಮಂಗಳವಾರ ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹಾಗೂ ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಕವಿ ಕುವೆಂಪು ಅವರ 116ನೇ ಜನ್ಮದಿನಾಚರಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಶರಣೇಗೌಡ ಯರದೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ನಂತರ ಹಿರಿಯ ಸಾಹಿತಿ ಮಹಾಂತಪ್ಪ ಮೇಟಿಗೌಡ ಅಮರಾವತಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 11 ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಂಗೀತ ಕಲಾವಿದ ಅಂಬಯ್ಯ ನುಲಿ, ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ತಾಯಪ್ಪ ಹೊಸೂರು, ರಂಗಪ್ಪ ಪಾಟೀಲ್ ಅಳ್ಳಂಡಿ, ರಮೇಶಬಾಬು ಯಾಳಗಿ, ಕೆ.ಈ.ನರಸಿಂಹ, ಬಸವರಾಜ ಮಡಿವಾಳ ದೇವದುರ್ಗ, ಲಕ್ಷ್ಮಣ ಜಾನೇಕಲ್, ಎಚ್.ಟಿ.ಪ್ರಕಾಶಬಾಬು. ಇದ್ದರು.

Don`t copy text!