ಕವಿತೆ
ಭೂೃಣ
ಅಮ್ಮಾ ..
ಮಾಂಸದ ಮುದ್ದೆಯಾದ ನನ್ನನು ಈ ಕತ್ತಲಿನಲಿ ಏಕೆ
ಬಂದಿಸಿದೆ.
ಸ್ಥ್ರೀ ಕುಲವೆ ಶಾಪವೆಂದು
ಕಿಂದರ ಜೋಗಿಗೆ ವಶವಾಗ
ಬೇಡ.
ವ್ಯವಸ್ತೆಯಈ ಉಗ್ರ ಶಿಕ್ಷೆಗೆ
ನನ್ನನು ಹಿಂಸಿಸಿ ಕೊಲ್ಲದಿರು.
ನಾನು ಎಂಜಲಿನ ಬಡತನದ
ಲಿ ಅನಾಥವಾಗಿರುವೆ.
ನೀನಿ ಓ ಗೊಡದೆ ಇದ್ದರೂ
ನಿನ್ನ ಅನಾಥ ವ್ಯಥೆಯು
ಅರ್ಥವಾಗುವುದಮ್ಮ…
ನನಗೋ ಕಾಮನ ಬಿಲ್ಲಿನ
ಜಗತ್ತಿಗೆ ರಾಣಿಯಾಗುವ ಆಶೆ
ಅಮ್ಮಾ.. ದಿನವೂ ನೀ ನೀಡುವ ಗುಟುಕಿಗೆ ಅನ್ವೇಷ
ಕಳು ನಾನು, ಹಸಿವಾದಾಗ
ನಿನ್ನ ಒಡಲಿಗೆ ಬಾಯಿ ತೆರೆಯುವೆ.
ಸ್ಪಶ೯ದ ಅನುಭೂತಿಯನು
ಅಂಗಲಾಚುವೆ.ನಿನ್ನದೇ ಭ್ರೂಣವಾದ ಈ ಮಾಂಸದ
ಮುದ್ದೆಗೆ ಜೀವವಿದೆ,ಮಿಸುಕಾಟವಿದೆ.
ಈ ಗಂಡು ಸಂತತಿಗೆ
ನಿನ್ನ ಹರಕೆಯೇ ಬೇಡ ವಾದಾಗ,ಅಂಗಲಾಚ ಬೇಡ.
ನೀನು ಶಕ್ತಿಯ ಪ್ರತೀಕಳೆಂದು
ನನಗೆ ಮಾತ್ರ ಗೊತ್ತು.
ಅಮ್ಮಾ ನಿನ್ನ ಸಂಕಟದ
ಕಣ್ಣೀರನು ,ದೂರದಿಂದಲೆ
ನೋಡುತ್ತಿದ್ದೇನೆ.
ಆದರೆ…..
ನಾನು ಗುಳೆಗೆ ಹೊರಟ
ವಾಯುವಾಗಿದ್ದೇನೆ.
ನೀನು ಭೂಮಿಯೇ
ಅಲ್ಲವೆ?
ನಾನು ಮೋಡವಾಗಿ
ಮಳೆಯಾಗಿ ಬರುವೆ.
ನನ್ನನು ಅಪ್ಪಿಕೊ ಅಮ್ಮಾ..
ಈ ಚೈತನ್ಯಕೆ ರೂಪ ಕೊಡುವ
ಮಾನ್ಯಳು ನೀನು.
ಆಣೆ ಮಾಡುವೆ ಧರ್ಮ
ಕಣ್ಣೀರಿನ ಬಿಂದುವಿಗೆ
ಮಾನಸಿಯಾಗುವೆ.
ಜೀವ ದ್ವನಿಯಾಗಿ ನಿನ್ನ
ಸ್ನೇಹಿತೆಯಾಗುವೆ.
ಡಾ. ಸರ್ವಮಂಗಳ ಸಕ್ರಿ
ರಾಯಚೂರು.