ಹೊಸ ವರುಷ

ಕವಿತೆ

ಹೊಸ ವರಷ

ಹೊಸ ವರುಷದಿ ಹೊಸಹರುಷದಿ
ಹೊಸ ದಿಗಂತದೆಡೆಗೆ ಸಾಗಿ ||
ಹೊಸ ಬಾಳು ಹೊಸ ಹೆಜ್ಜೆ
ಹೊಸೆದು ಹೊಂಗನಸನ್ನು ||
ಹೊಸ ಆಸೆ ಹೊಸ ಕನಸು
ಹೊಸ ದಾರಿ ತುಳಿಯುತಲಿ||
ಹೊಸ ಭಾವ ಹೊಸ ಬಂಧ
ಹೊಸ ಸ್ನೇಹ ಬಯಸುತಲಿ ||
ಹೊಸದೆನೋ ತುಡಿತ ಮಿಡಿತ
ಹೊಸ ರಸಧಾರೆ ಸವಿಯುತಲಿ ||
ಹೊಸ ಕಾವ್ಯ ಕಟ್ಟಿ, ರಸಭಾವ ಗಟ್ಟಿ
ಹೊಸ ದಿಶೆಯಲಿ ಸಾಗೋಣ ಮೆಟ್ಟಿ ||
ಹೊಸ ಚಿಂತನೆ ಹೊಸ ಮಂಥನ
ಹೊಸ ಅವಿಷ್ಕಾರದೆಡೆಗೆ ಸಾಗಿ ||
ಹೊಸ ಭಾಗ್ಯದ ಬಾಗಿಲಲ್ಲಿ
ಹೊಸ ತೋರಣ ತಳಿರು ಕಟ್ಟಿ ||
ಹೊಸ ಭಾಷ್ಯ ಬರೆಯುವಾ
ಹೊಸ ಜೀವನ ಪಡೆಯುವಾ ||
ಹೊಸಬಯಕೆಯಲಿ ಹಳೆಯದನು ಮರೆತು
ಹೊಸ ಬದುಕ ಬಾಳೋಣ ಅರಿತು ||
ಹೊಸ ಜೀವನ ಭವ್ಯವಾಗಲೇಂದು ಬಯಸಿ
ಹೊಸ ವಿಚಾರದಿ ವಿಜಯಮಹಾಂತಗೆ ನಮಿಸುವಾ||

ಸವಿತಾ ಮಾಟೂರು, ಇಲಕಲ್ಲ

Don`t copy text!