e-ಸುದ್ದಿ, ಮಸ್ಕಿ
ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹಿಸಿ ಸಿಂಧನೂರಿನಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಮಸ್ಕಿಯಿಂದ ನೂರಾರು ಜನರು ಪಾದಯಾತ್ರೆ ಮೂಲಕ ತೆರಳುತ್ತೇವೆ ಎಂದು ಕುರುಬ ಸಮಾಜದ ಮುಖಂಡ ಕರಿಯಪ್ಪ ಹಾಲಪೂರು ಹೇಳಿದರು.
ಪಟ್ಟಣದ ಕನಕನಗರದಲ್ಲಿರುವ ಕನಕಭವನದಲ್ಲಿ ಶುಕ್ರವಾರ ಹಾಲುಮತ ಸಮಾಜದವರ ಪೂರ್ವಬಾವಿ ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು. ರಾಜ್ಯ, ಕೇಂದ್ರ ಸರಕಾರದ ಗಮನ ಸೆಳೆಯಲು ಬೃಹತ್ ಸಮಾವೇಶವನ್ನು ಸಿಂಧನೂರಿನಲ್ಲಿ ಜ.4ರಂದು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ತಾಲೂಕಿನಿಂದ ಸಾವಿರಾರು ಜನರು ಸೇರುತ್ತಿದ್ದ ಇದಕ್ಕೆ ಪೂರಕವಾಗಿ ಮಸ್ಕಿಯಿಂದ ಜ.3ರಂದು ಪಾದಯಾತ್ರೆ ಮೂಲಕ ಸಿಂಧನೂರಿನಲ್ಲಿ ನಡೆಯುವ ಸಮಾವೇಶಕ್ಕೆ ತೆರಳಲಾಗುತ್ತದೆ ಎಂದರು.
ಕುರುಬ ಸಮಾಜ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಂತಿ ಹಿಂದುಳಿದ ಸಮುದಾಯವಾಗಿದೆ. ಈಗಲೂ ಕುರುಬ ಸಮಾಜದ ಜನರು ಆದಿವಾಸಿಗಳಂತೆ ಗುಡ್ಡು-ಗಾಡಿನಲ್ಲಿ ವಾಸ ಮಾಡುತ್ತಿದ್ದಾರೆ. ಹೀಗಾಗಿ ಮೂಲತಃ ಬುಡಕಟ್ಟು ಜನಾಂಗವಾಗಿರುವ ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿ ಸೇರಿಸುವ ಸಂಬಂಧ ಸಿಂಧನೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಮಸ್ಕಿ ತಾಲೂಕಿನಿಂದ ಹೆಚ್ಚು ಜನ ಭಾಗವಹಿಸುತ್ತಿರುವದಾಗಿ ತಿಳಿಸಿದರು.
ಕುರುಬ ಸಮಾಜದ ಮುಖಂಡರಾದ ಮಲ್ಲನಗೌಡ ಸುಂಕನೂರು, ದುರುಗೇಶ ವಕೀಲ, ಬಸವರಾಜ ವಕೀಲ, ಮಲ್ಲಣ್ಣ ಮಸ್ಕಿ, ಮಲ್ಲಯ್ಯ ಅಂಬಾಡಿ, ರಮೇಶ ಕಡಬೂರು, ಬಸವರಾಜ ಕಡಬೂರು, ಮಲ್ಲರೆಡ್ಡಪ್ಪ ಸೇರಿ ಇತರರು ಇದ್ದರು.
ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸಲು ಒತ್ತಾಯಿಸಿ ಜ.3ರಂದು ಪಾದಾಯಾತ್ರೆ
One thought on “ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸಲು ಒತ್ತಾಯಿಸಿ ಜ.3ರಂದು ಪಾದಾಯಾತ್ರೆ”
Comments are closed.
Super