ಮುಂಬಡ್ತಿ ಪಡೆದ ಶಿಕ್ಷಕ ಅಪಘಾತದಲ್ಲಿ ಸಾವು

ಮುಂಬಡ್ತಿ ಪಡೆದ ಶಿಕ್ಷಕ ಅಪಘಾತದಲ್ಲಿ ಸಾವು

e-ಸುದ್ದಿ, ಮಸ್ಕಿ

ಮಸ್ಕಿ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಯಿಂದ ಪ್ರೌಢಶಾಲಾ ಶಿಕ್ಷಕರಾಗಿ ಮುಂಬಡ್ತಿ ಪಡೆದು ಬರುತ್ತಿದ್ದ ಶಿಕ್ಷಕ ರಸ್ತೆ ಅಪಘಾತದಲ್ಲಿ ಸಾವನ್ನಪಿದ ಘಟನೆ ಮಸ್ಕಿ ತಾಲ್ಲೂಕಿನ ಗುಡದೂರು ಬಳಿ ಸೋಮವಾರ ರಾತ್ರಿ ನಡೆದಿದೆ.
ಉದ್ಬಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ರಾಮಯ್ಯ ನಾಯಕ (53) ಅವರೇ ಮುಂಬಡ್ತಿ ಪಡೆದ ದಿನವೇ ಮೃತಪಟ್ಟ ಶಿಕ್ಷಕರು.
ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಸಿಂಧನೂರು ತಾಲ್ಲೂಕು ಶಿಕ್ಷಣಾಧಿಕಾರಿಯಿಂದ ಮುಂಬಡ್ತಿ ಆದೇಶ ಪಡೆದು ವಾಪಾಸು ಬೈಕ್ ನಲ್ಲಿ ಬರುವಾಗ ಗುಡದೂರು ಗ್ರಾಮದ ಬಳಿ ನಡೆಯುತ್ತಿದ್ದ ಹೆದ್ದಾರಿ ಡಾಂಬರೀಕಣ ಕಾಮಗಾರಿಗೆ ಸೇರಿದ ವಾಹನಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಸಾವಿನ ಸುದ್ದಿ ತಿಳಿಯುತ್ತಲೇ ಅಪಾರ ಸಂಖ್ಯೆಯಲ್ಲಿ ಶಿಕ್ಷಕರು ಮಸ್ಕಿಯ ಸರ್ಕಾರಿ ಆಸ್ಪತ್ರೆಗೆ ಅಗಮಿಸಿ ಸಹಪಾಠಿ ಶಿಕ್ಷಕನ‌ ಸಾವಿಗೆ ಕಂಬನಿ‌ ಮೀಡಿದರು.

Don`t copy text!