e-ಸುದ್ದಿ ಮಸ್ಕಿ
ಜಾನಪದ ಕಲೆಯನ್ನು ಉಳಿಸುವುದಕ್ಕಾಗಿ ಬದುಕಿನುದ್ಧಕ್ಕೂ ಹಗಲು ವೇಷಗಾರ ಜಂಬಣ್ಣ ಹಸಮಕಲ್ ಕಠಿಣ ಪರಿಶ್ರಮ ಪಟ್ಟಿದ್ದರಿಂದ ಇಂದು ಅವರಿಗೆ ಸರ್ಕಾರದಿಂದ ಜಾನಪದ ಪ್ರಶಸ್ತಿಯ ಗೌರವ ದೊರೆತಿದೆ ಎಂದು ಮಸ್ಕಿಯ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಗಚ್ಚಿನ ಮಠದ ಆವರಣದಲ್ಲಿ ಶುಕ್ರವಾರ ರಾಜ್ಯ ಮಟ್ಟದ ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕøತ ಹಸಮಕಲ್ ಗ್ರಾಮದ ಜಂಬಣ್ಣರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.
ಆಧುನಿಕ ಕಾಲದಲಿ ಜಾನಪದ ಕಲೆ, ಸಾಹಿತ್ಯಗಳನ್ನು ಉಳಿಸಿಕೊಂಡು ಹೋಗುವುದು ಕಷ್ಟದ ಕಾಲದಲಿ ಜಂಬಣ್ಣನವರು ಹಲವು ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಅವರ ಕಲಾ ಸೇವೆಯನ್ನು ಗುರಿತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದರು. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್. ಬಾಲಾಜಿ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಶರಣಪ್ಪ ಗೋನಾಳ, ಕನ್ನಡ ಸಾಹಿತ್ಯ ಪರಿಷತ್ ಮಸ್ಕಿ ತಾಲೂಕು ಅಧ್ಯಕ್ಷ ಘನಮಠದಯ್ಯ ಸಾಲಿಮಠ, ಉಪನ್ಯಾಸಕ ಮಹಾಂತೇಶ ಮಸ್ಕಿ, ಮಹಿಳಾ ಸಂಘದ ದಾನಮ್ಮ, ಮಲ್ಲಪ್ಪ ಪೂಜಾರಿ, ಚನ್ನಪ್ಪ ಸೇರಿದಂತೆ ಇತರರು ಇದ್ದರು.