e-ಸುದ್ದಿ, ಮಸ್ಕಿ
ಪಟ್ಟಣದ ಹಳೆಯ ಪುರಸಭೆ ಜಾಗದಲ್ಲಿ 2 ಕೋಟಿ ರೂಪಾಯಿಗಳ ವಿಶೇಷ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡ ಕಾಮಗಾರಿಯನ್ನು ಪುರಸಭೆ ಅಧ್ಯಕ್ಷೆ ವೀಜಯಲಕ್ಷ್ಮೀ ಪಾಟೀಲ್ ಮತ್ತು ಮುಖ್ಯಾಧಕಾರಿ ಹನುಮಂತಮ್ಮ ನಾಯಕ ಶುಕ್ರವಾರ ಪರಿಶೀಲನೆ ನಡೆಸಿದರು.
ಸಾರ್ವಜನಿಕರ ಅನೂಕೂಲಕ್ಕಾಗಿ ಸುಸಜ್ಕಿತವಾದ ಕಚೇರಿಯನ್ನು ನಿರ್ಮಿಸಲಾಗುತ್ತಿದ್ದು. ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಇನ್ನೇರಡು ತಿಂಗಳಿನಲ್ಲಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕೆಆರ್‍ಐಡಿಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪುರಸಭೆ ಉಪಾಧ್ಯಕ್ಷೆ ಕವಿತಾ ಮಾಟೂರು, ಜಿಲ್ಲಾ ನಗರಾಭಿವೃದ್ಧಿ ಕೋಶಾದ ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ ಗೋಪಿಶೆಟ್ಟಿ, ಸಹಾಯಕ ನಿರ್ವಾಹಕ ಎಂಜಿನಿರ್ ನಾನಾಸಾಬ್ ಮಡಿವಾಳ್, ಎಂಜಿನಿಯರ್ ಮೀನಾಕ್ಷಿ ದೇಸಾಯಿ, ಪುರಸಭೆ ಸದಸ್ಯರಾದ ರಂಗಪ್ಪ ಅರೀಕೆರ, ಪುರಸಭೆ ಸದಸ್ಯೆ ರೇಣುಕಾ ಉಪ್ಪಾರ , ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ್, ಅಮರೇಶ ಮಾಟೂರ್, ಅಭಿಜೀತ್ ಮಾಲೀಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಸೇರಿದಂತೆ ಇತರರು ಇದ್ದರು.