ದಾಸಾನುದಾಸರು
ಈ ಸಂಪತ್ತು, ಗೌರವ
ಬೇಕಿಲ್ಲ ನನಗಿಲ್ಲಿ
ಇರುವ ಯೌವ್ವನವನ್ನು
ಕಿತ್ತುಕೊಳ್ಳಿ ||
ಬಾಲ್ಯದ ಮಳೆಗಾಲವ
ಕಾಗದದ ದೋಣಿಯ
ಕೊಟ್ಟು ಬಿಡಿ ನನಗೆ
ನನಗಷ್ಟೇ ಸಾಕು ||
ಪಡೆಯುವುದಷ್ಟೇ ಪ್ರೇಮವಲ್ಲ
ಈ ಜಗದಿ
ಆರಾಧನೆಯೂ ಪ್ರೇಮ
ನಿರಂತರ ಯುಗದಿ ||
ನಿನ್ನ ಕಣ್ಣ ಸಾಗರದಾಳದಲಿ
ಮುಳುಗಲು ಬಿಡು
ನಿನ್ನ ಅಪರಾಧಿ ನಾನು
ಸಾಯಲು ಬಿಡು ||
ಯುವ ಜನರ ಹೃದಯದಿ
ಪ್ರೀತಿ ಸಸಿಯು
ಅಂಕುರಿಸಿದಾಗ ಅದು
ಮೋಹವಾಗದಿರಲಿ ||
ಸಂಘರ್ಷ ಪ್ರೀತಿ ಪ್ರೇಮದ
ನೋವೂ ಕೂಡ
ತಂದೀತು ಸಂತಸ ಅರಳಿದ
ಹೂ ನಗೆ ||
ಪ್ರೀತಿಯ ಧ್ವನಿಗೆ
ಒಲವಿನ ಮಾಧುರ್ಯಕೆ
ನೋವಿನೊಳಗೆ
ಭಗ್ನ ಪ್ರೇಮಿಗಳು ದಾಸಾನುದಾಸರು ||
✍️ ಅಯ್ಯಪ್ಪಯ್ಯ ಹುಡಾ ರಾಯಚೂರು