ಭಾರತದ ಉಜ್ವಲ ಭವಿಷ್ಯ ಯುವಕರಲ್ಲಿ ಅಡಗಿದೆ-ಲಾಲಸಾಬ್

 

e-ಸುದ್ದಿ, ಮಸ್ಕಿ

ಜಗತ್ತಿನಲ್ಲಿಯೇ ಅತಿ ಹೆಚ್ಚು ಯುವ ಜನತೆ ಹೊಂದಿರುವ ಭಾರತದಲ್ಲಿ ಅತ್ಯಂತ ಉಜ್ವಲವಾಗಿಸುವ ಶಕ್ತಿ ಯುವಕರಲ್ಲಿದೆ ಎಂದು ಪ್ರಾಧ್ಯಾಪಕ ಲಾಲಸಾಬ್ ಬನ್ನಿಗೋಳ್ ಹೇಳಿದರು.
ಪಟ್ಟಣದ ದೇವಾನಾಂಪ್ರೀಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರೆಡ್ ಕ್ರಾಸ್, ಭಾರತ ಸೇವಾದಳ, ಯುವ ಸ್ಪಂದನ ರಾಯಚೂರು ಹಾಗೂ ಸ್ಕೌಟ್ಸ್, ಗೈಡ್ಸ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ಸಾಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯುವಕರು ನಿರ್ದಿಷ್ಟ ಗುರಿ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಜೀವನ ರೂಪಿಸಿಕೊಳ್ಳಂಡು, ಸ್ವಾಮಿ ವಿವೇಕಾನಮದರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.
ಪ್ರಚಾರ್ಯ ಪಂಪನಗೌಡ ಗುರಿಕಾರ ಮಾತನಾಡಿ ವಿದ್ಯಾರ್ಥಿಗಳು ವಿವೇಕಾನಂದರಂತೆ ಉತ್ತಮ ಜ್ಞಾನಿಗಳಾಗಿ ವಾಕ್ ಚಾರ್ತುದಿಂದ ಜಗತ್ತಿಗೆ ಆದರ್ಶ ಪ್ರಾಯರಾಗಬೇಕೆಂದರು.
ಉಪನ್ಯಾಸಕರಾದ ಶ್ರೀನಿವಾಸ ಶ್ರೀನಿವಾಸ ಯಾಳಗಿ, ಶಿವುಗ್ಯಾನಪ್ಪ, ರೋಹಿಣಿ ಮೂರ್ತಿ, ಮಂಜುನಾಥ, ಅಜರ್ ಹುಸೇನ್, ಸೇರಿದಂತೆ ಇತರರು ಇದ್ದರು.

Don`t copy text!