ಮಸ್ಕಿ ತಾಲೂಕಿನ ವಿವಿಧಡೆ ರೈತರು ಚರಗ ಚೆಲ್ಲುವ ಸಂಭ್ರಮ

e-ಸುದ್ದಿ, ಮಸ್ಕಿ
ಉತ್ತರ ಕರ್ನಾಟಕ ಭಾಗದ ರೈತರ ಪ್ರಮುಖ ಹಬ್ಬವಾದ ಎಳ್ಳು ಅಮವಾಸ್ಯೆಯನ್ನು ಬುಧವಾರ ತಾಲೂಕಿನಾಧ್ಯಂತ ರೈತರು ಸಂಭ್ರಮದಿಂದ ಆಚರಿಸಿದರು.
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೇ ರೈತರು ಹಬ್ಬದ ಸಂಭ್ರಮದಲ್ಲಿದ್ದರು. ಹಬ್ಬದ ನಿಮಿತ್ತ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿಕೊಂಡು, ಬುತ್ತಿ ಕಟ್ಟಿಕೊಂಡು ಎತ್ತಿನ ಗಾಡಿಗೆ ಶೃಗಾಂರ ಮಾಡಿಕೊಂಡು ಕುಟುಂಬ ಸದಸ್ಯರೊಂದಿಗೆ ಜಮೀನುಗಳಿಗೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ರೈತರು ಮತ್ತು ಮಹಿಳೆಯರು ಹೊಲದಲ್ಲಿ ಪಂಚ ಪಾಂಡವರಿಗೆ ಪೂಜೆ ಸಲ್ಲಿಸಿದ ನಂತರ ಕುಟುಂಬ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತುಕೊಂಡು ಹಬ್ಬಕ್ಕಾಗಿಯೇ ತಯ್ಯಾರಿಸಿದ್ಧ ರೊಟ್ಟಿ, ಪುಂಡಿಪಲ್ಲೇ, ಗಟ್ಟಿಬೆಳೆ, ಭಜ್ಜಿ, ಶೇಂಗಾ ಹಾಗೂ ಎಳ್ಳು ಹೊಳಿಗೆ ಸೇರಿದಂತೆ ವಿವಿಧ ಬಗೆಯ ರುಚಿ-ರುಚಿಯಾದ ತಿಂಡಿ-ತಿನಿಸುಗಳನ್ನು ಸವಿದು ವಿಶಿಷ್ಟವಾಗಿ ಎಳ್ಳ ಅಮವಾಸ್ಯೆ ಹಬ್ಬವನ್ನು ಆಚರಿಸಿದರು.


 

ಮಸ್ಕಿ ಪಟ್ಟಣದ ಹೊರವಲಯದಲ್ಲಿರುವ ಹೊಲದಲ್ಲಿ ಸಂಕ್ರಾತಿ ಹಬ್ಬದ ಮುನ್ನಾದಿನವಾದ ಬುಧವಾರ ಕಾಶಿನಾಥ ಮುರಾರಿ ಕುಟುಂಬದ ಸದಸ್ಯರು ಸರಗ ಚಲ್ಲಿ ಕೂಡು ಕುಟುಂಬದೊಂದಿಗೆ ಊಟದ ಸವಿ ಸವಿದರು.

 

Don`t copy text!