ರಾಷ್ಟ್ರೀಯ ಕಲಾ ವಿಭೂಷಣ ರಾಷ್ಟ್ರ ಪ್ರಶಸ್ತಿ ಗೌರವ
ಚಲನಚಿತ್ರ ಹಿರಿಯ ಕಲಾವಿದೆ ಶ್ರೀಮತಿ ಗಿರಿಜಾ ಲೋಕೇಶ್‍ರವರಿಗೆ
70ರ ಅಭಿನಂದನೆ ಮತ್ತು ರಾಷ್ಟ್ರೀಯ ಕಲಾ ವಿಭೂಷಣ ರಾಷ್ಟ್ರ ಪ್ರಶಸ್ತಿ ಗೌರವ
ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಕಳೆದ 27 ವರ್ಷದಲ್ಲಿ, ಸಾಂಸ್ಕøತಿಕ ಲೋಕದಲ್ಲಿ ಆನೆಯಂತೆ ನಡೆದು, ಅನೇಕ ದಾಖಲೆ ನಿರ್ಮಿಸಿದೆ. ಪ್ರಶಸ್ತಿ ಪ್ರದಾನಕ್ಕೆಂದೆ ಜನಿಸಿದ ಸಂಸ್ಥೆ.
ಇದುವರೆಗೆ 10 ಮಕ್ಕಳ ಸಮ್ಮೇಳನ, 5 ರಾಷ್ಟ್ರೀಯ ನೃತ್ಯ ಕಲಾ ಮೇಳ, 5 ಕವಿ ಸಮ್ಮೇಳನ, 3 ಚುಟುಕು ಸಾಹಿತ್ಯ ಸಮ್ಮೇಳನ, 2 ಪತ್ರಕರ್ತರ ಸಮಾವೇಶ, 11 ಚಿತ್ರಕಲಾ ಪ್ರದರ್ಶನ, 4 ವ್ಯಂಗ್ಯ ಚಿತ್ರಕಲಾ ಪ್ರದರ್ಶನ, 26 ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಮೂಲಕ 300 ಕನ್ನಡ ಕೃತಿಗಳಿಗೆ 10 ಲಕ್ಷ ರೂ.ಗಳ ನಗದು ಬಹುಮಾನ, 17 ನಾಟಕೋತ್ಸವ ಮೂಲಕ 68 ನಾಟಕ ಪ್ರದರ್ಶನ, 160 ಏಕ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ, 60ಕ್ಕೂ ಹೆಚ್ಚು ವಿಚಾರಸಂಕಿರಣ, ನೂರಾರು ಉಪನ್ಯಾಸ ಸೇರಿದಂತೆ, 64 ವಿವಿಧ ಸಾಂಸ್ಕøತಿಕ ಸಮ್ಮೇಳನಗಳನ್ನು ನಡೆಯಿಸಿದೆ.
ಪ್ರಸ್ತುತ 23-01-2021, ಶನಿವಾರ ಬೆಳಿಗ್ಗೆ 10ಕ್ಕೆ, ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ, 28ನೇ ವಾರ್ಷಿಕೋತ್ಸವದಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ಜೀವನ ಚರಿತ್ರೆ ಹಾಗೂ ಹಾಸನ ತಾಲ್ಲೂಕುಗಳ ದೇವಾಲಯಗಳ ದರ್ಶನ ಮಾಹಿತಿ ಕೋಶ ಪುಸ್ತಕ ಬಿಡುಗಡೆ ಹಾಗೂ ಜೀವಮಾನ ಸಾಧನೆಗಾಗಿ ಆರು ಪ್ರಮುಖ ಸಾಧಕರಿಗೆ ಅಭಿನಂದನೆ ಸಮಾರಂಭ ಹಮ್ಮಿಕೊಂಡಿದೆ.
ಕನ್ನಡ ರಂಗಭೂಮಿ, ಕಿರುತರೆ, ಚಲನಚಿತ್ರಗಳ ಹಿರಿಯ ಕಲಾವಿದೆ, ಶ್ರೀಮತಿ ಗಿರಿಜಾ ಲೋಕೇಶ್, ಕಿರುತರೆ- ಚಲನಚಿತ್ರ ಕಲಾವಿದ ಮಾಜಿ ಶಾಸಕ, ಪ್ರಸ್ತುತ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರಬಾಬು, ಸಾರ್ವಜನಿಕ ಗ್ರಂಥಾಲಯದ ಡಿಜಿಟಲ್ ಲೈಬ್ರರಿ ರೂವಾರಿ ಡಾ. ಸತೀಶ್‍ಕುಮಾರ್ ಎಸ್. ಹೊಸಮನಿ, ಕಿರಿ ವಯಸ್ಸಿನಲ್ಲಿ ಅಂಬೇಡ್ಕರ್ ನಿಗಮದ ವ್ಯವಸ್ಥಾಪಕಿ ಹುದ್ದೆಯಿಂದ ತಮ್ಮ ದಕ್ಷ ಪ್ರಾಮಾಣಿಕ ಸೇವೆಗೆ, ಪದೋನ್ನತಿ ಪಡೆದು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಕವಿತಾ ಎಂ. ವಾರಂಗಲ್, ಬಿಬಿಎಂಪಿ. ಮೇಲ್ಮನವಿ ಸಮಿತಿಯ ಅಧ್ಯಕ್ಷರಾಗಿ, ಗಣನೀಯ ಸೇವೆ ಸಲ್ಲಿಸಿದ ಡಾ. ಸಿ.ಆರ್. ಲಕ್ಷ್ಮೀನಾರಾಯಣ, ಚಿಕ್ಕವಯಸ್ಸಿನಲ್ಲಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡು, ಆರ್ಥಿಕ-ಧಾರ್ಮಿಕ-ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು, ಕೊರೊನಾ ವಾರಿಯರ್ ಆಗಿ ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದ ಡಾ. ಜಿ. ಅಂಬರೀಷ್ ರವರಿಗೆ ಅಭಿನಂದನೆ ಮತ್ತು ಗೌರವ ಪ್ರಶಸ್ತಿ ಪ್ರದಾನ ಮಾಡಲಾಗವುದು ಎಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ನಿವೃತ್ತ ಐ.ಎ.ಎಸ್. ಅಧಿಕಾರಿ ಟಿ. ತಿಮ್ಮೇಗೌಡರವರು ಉದ್ಘಾಟಿಸಲಿದ್ದು, ಹಿರಿಯ ಶಾಸಕ, ಮಾಜಿ ಸಚಿವ ಶ್ರೀ ಅಮರೇಗೌಡ ಬಯ್ಯಾಪುರ, ಚಲನಚಿತ್ರ ಕಲಾವಿದ ಗಣೇಶ್‍ರಾವ್ ಕೇಸರ್‍ಕರ್‍ರವರು ಪ್ರಶಸ್ತಿ ಪುರಸ್ಕøತರಿಗೆ ಗೌರವಿಸಲಿದ್ದಾರೆ.
ಡಾ. ಭದ್ರಾವತಿ ರಾಮಾಚಾರಿ ಸಂಪಾದಕತ್ವದ ಎಸ್.ಪಿ. ಬಾಲಸುಬ್ರಮಣ್ಯಂ ಜೀವನ ಚರಿತ್ರೆ ಹಾಗೂ ಶ್ರೀ ಗೊರೂರು ಅನಂತರಾಜುರವರ ಹಾಸನ ತಾಲ್ಲೂಕು ದೇವಾಲಯಗಳ ದರ್ಶನ ಮಾಹಿತಿ ಕೋಶ ಪುಸ್ತಕ ಹಿರಿಯ ಸಾಹಿತಿ ಪದ್ಮಶ್ರೀ ಡಾ. ದೊಡ್ಡರಂಗೇಗೌಡರು ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ವಿಶ್ವಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ಕುಮಾರಚಂದ್ರಶೇಖರನಾಥ ಮಹಾ ಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಕಲ್ಮೇಶ್ವರ ಮಹಾಸ್ವಾಮೀಜಿ, ಡಾ. ಚಿಕ್ಕಹೆಜ್ಜಾಜಿ ಮಹಾದೆವ, ಶ್ರೀಮತಿ ಪಂಕಜಾ ರವಿಶಂಕರ್, ಡಾ. ಶೇಖರ್‍ಗೌಡ ಮಾಲಿಪಾಟೀಲ್, ಅಭಿನಂದನಾ ಭಾಷಣವನ್ನು ಲೇಖಕ ಶ್ರೀ ಕಾಂತರಾಜ್‍ಪುರ ಸುರೇಶ ಮಾತನಾಡಲಿದ್ದಾರೆ. ನೂತನ ಗೌರವ ಅಧ್ಯಕ್ಷರಾಗಿ ಡಾ. ಮಹೇಂದ್ರಸಿಂಗ್ ರಾಜ್‍ಪುರೋಹಿತ್ (ಕಾಳಪ್ಪ) ಪದಗ್ರಹಣ ಮಾಡಲಿದ್ದಾರೆ.
ಮಧ್ಯಾಹ್ನ 3 ರಿಂದ ರಾತ್ರಿ 9 ಗಂಟೆಯವರೆಗೆ, ನಾಟ್ಯಮಯ ಈ ಲೋಕವೆಲ್ಲ ಮತ್ತು ನಾದಮಯ ಈ ಲೋಕವೆಲ್ಲ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಮೈಸೂರು ರಮಾನಂದ ರಚನೆ ಮತ್ತು ನಿರ್ದೇಶನದ, ಹೆಜ್ಜೆ-ಗೆಜ್ಜೆ ತಂಡದಿಂದ ರಾತ್ರಿ 7 ಗಂಟೆಗೆ “ಚೋರ ಗುರು ಚಂಡಾಲ ಶಿಷ್ಯ” ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.