e-ಸುದ್ದಿ, ಮಸ್ಕಿ
ತಾಲೂಕಿನ ಸಂತೆಕೆಲ್ಲೂರು ಗ್ರಾಮದ ವೈರಾಗ್ಯ ಚಕ್ರವರ್ತಿ, ಕೃಷಿಋಷಿ ಘನಮಠ ನಾಗಭೂಷಣ ಶಿವಯೋಗಿಗಳ 141ನೇ ಪುಣ್ಯ ಸ್ಮರಣೋತ್ಸವ ಹಾಗೂ ರಥೋತ್ಸವವು ಆದ್ಧೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ನೇರವೆರಿತು.
ಬೆಳಿಗ್ಗೆ 5 ಗಂಟೆಗೆ ಶ್ರೀಮಠದ ಸಂಪ್ರದಾಯದಂತೆ ವೈರಾಗ್ಯ ಚಕ್ರವರ್ತಿ, ಕೃಷಿಋಷಿ ಘನಮಠದ ನಾಗಭೂಷಣ ಶಿವಯೋಗಿಗಳ ಕತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನೇರವೆರಿಸಲಾಯಿತು. ನಂತರ 7 ರಿಂದ 9 ರ ವರೆಗ ಜಂಗಮ ಪಟುಗಳಿಗೆ ಅಯ್ಯಚಾರ ಕಾರ್ಯಕ್ರಮ ನಡೆಯಿತು. ತದನಂತರದಲ್ಲಿ ಪಲ್ಲಕ್ಕಿ ಉತ್ಸವ, ಕಳಸಾರೋಹಣ ನಡೆಯಿತು.
ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಇಲಕಲ್ ವಿಜಯ ಮಹಾಂತೇಶ್ವರ ಮಠದ ಪೂಜ್ಯ ಶ್ರೀ ಗುರುಮಹಾಂತ ಮಹಾಸ್ವಾಮಿಗಳಿಗೆ ಸಂಯಮ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಭಕ್ತಾಧಿಕಾರಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸಂಜೆ 5 ಗಂಟೆಗೆ ರಥೋತ್ಸವ ನಡೆಯಿತು. ಸಾವಿರಾರು ಭಕ್ತಾಧಿಗಳು ರಥೋತ್ಸವ ಬಾಳೆ ಹಣ್ಣು, ಊತ್ತುತ್ತಿ ಎಸೆಯುವ ಮೂಲಕ ಭಕ್ತಿಯನ್ನು ಸಮರ್ಪಿಸಿಕೊಂಡರು.
ಸಿದ್ದಲಿಂಗ ಮಹಾಸ್ವಾಮಿಗಳು ಒಳಬಳ್ಳಾರಿ, ಮಹಾಂತಲಿಂಗ ಶಿವಾಚಾರ್ಯರು ನಂದವಾಡಗಿ, ರಾಜಶೇಖರ ಶಿವಾಚಾರ್ಯರು ಕಲಬುರಗಿ, ಕೆಂಚಬಸವ ಶಿವಾಚಾರ್ಯರು ಕಲಬುರಗಿ, ವರರುದ್ರಮುನಿ ಶಿವಾಚಾರ್ಯರು ಗಚ್ಚಿನಮಠ ಮಸ್ಕಿ, ಮರಿಮಹಾಂತ ದೇವರು ಸಂತೆಕೆಲ್ಲೂರು, ಕುಷ್ಟಗಿ ಶಾಸಕ ಅಮರೇಗೌಡ ಪಾಟಿಲ್ ಬಯ್ಯಾಪೂರು, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಶರಣಪ್ಪಗೌಡ ಸಿರವಾರ, ಹನುಮಗೌಡ ಬೆಳಗುರ್ಕಿ, ಅಮರೇಗೌಡ ಕಾರ್ಲಕುಂಟಿ, ಅಪ್ಪಾಜಿಗೌಡ ಕಾರ್ಲಕುಂಟಿ, ಮರಿಗೌಡ್ರು ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಇದ್ದರು.