ಆಸೆ ಮತ್ತು ಬದುಕಿನ ಗುರಿ
ಒಂದೇ ರಸ್ತೆಯ ಮೇಲೆ ಇಬ್ಬರು ಪ್ರಯಾಣಿಸುತ್ತಿದ್ದರು
ಆ ರಸ್ತೆಯ ಹೆಸರು ಜೀವನ,
ಇಬ್ಬರೂ ಕೂಡ ಸೇರಬೇಕಿರುವುದು ಒಂದೇ ಗುರಿಯತ್ತ ಅದೇ ಮುಕ್ತಿ ಬಯಲು,
ಈ ದಡದಿಂದ, ಆ ದಡದವರೆಗೆ,
ಸಾಗಬೇಕಿದೆ ಪಯಣ
ಅದರ ಮಧ್ಯೆ ನೂರೆಂಟು ತೊಡಕುಗಳು ಒಮ್ಮೊಮ್ಮೆ ನೋವು, ಒಮ್ಮೊಮ್ಮೆ ಆನಂದ,
ಇದಕ್ಕೆ ಮೂಲ ಕಾರಣವೇ ಮನಸ್ಸು
ಈ ಇಬ್ಬರು ಪಯಣಿಸುವ ರಸ್ತೆಯಲ್ಲಿ
ಬೇಕು ಬೇಡಗಳ ಜಾತ್ರೆಯಿದೆ
ಅಲ್ಲಿ ಅನ್ನ ಅರಿವು (ಅರಿವೆ-ಬಟ್ಟೆ) ಔಷಧಿ ಮತ್ತು
ಮಧ್ಯ ಮಾಂಸ ಗುಟ್ಕಾ
ಗಾಂಜಾ
ನೋಟಕ್ಕು ಕೂಟಕ್ಕೂ ಉಂಟು
ಮೋಹ ಮಾಯೆಯ ಜಾತ್ರೆ ಅದು,
ಇದರಲ್ಲಿ ಒಬ್ಬನ ಆಯ್ಕೆ
ಅನ್ನ, ಅರಿವು ಶಾಲೆ, ಅರಿವೆ ಬಟ್ಟೆ ಅನಾರೋಗ್ಯದಲ್ಲಿ ಔಷಧಿ
ಇದನ್ನು ಬಳಸಿಕೊಂಡು ತನ್ನ ಗುರಿಯತ್ತ ಮುನ್ನಡೆದ
ಇನ್ನೊಬ್ಬನ ಆಯ್ಕೆ
ಬೇಡದ ಜಾತ್ರೆ
ಮಧ್ಯ ಮಾಂಸ ಗುಟ್ಕಾ ಅನವಶ್ಯಕವಾಗಿ ದುಷ್ಟರ ಸಂಗದಲ್ಲೇ ಇದ್ದು
ತಾನು ಸೇರಬೇಕಿದ್ದ ಗುರಿಯನ್ನು ಮರೆತೇ ಬಿಟ್ಟ.
ಇನ್ನೊಬ್ಬ ಅವಶ್ಯಕ್ಕೆ ಬೇಕಿರುವುದನ್ನು ಮಾತ್ರ ಬಳಸಿಕೊಂಡು
ತನ್ನ ಗುರಿಯನ್ನು ತಲುಪಿದೆ
ಅವನ ಜೀವನ ತೀರ್ಥಯಾತ್ರೆ
ಅವನೇ ಯೋಗಿಯಾದ
ಇನ್ನೊಬ್ಬ ಭೋಗಿಯಾಗಿ ರೋಗಿಯಾದ
ಇಷ್ಟೆಲ್ಲ ಆದರೂ
ಇಬ್ಬರೂ ಹೋಗುವ ಮಾರ್ಗವೂ ಒಂದೇ ಆಗಿತ್ತು,
ಗುರಿಯೂ ಒಂದೇ ಆಗಿತ್ತು,
ಆದರೆ
ಒಬ್ಬನ ಮನಸ್ಸು ಬದುಕಿನ ಗುರಿಯತ್ತ ನಡೆದಿತ್ತು,.
ಇನ್ನೊಬ್ಬನ ಮನಸ್ಸು ಚಂಚಲವಾಗಿ ಸುತ್ತಿ ಸುತ್ತಿ ಅಲ್ಲೇ ಬಿದ್ದಿತ್ತು,.
ಬದುಕಿನ ಗುರಿಯತ್ತ ನಡೆದವ ಯೋಗಿ ಎನಿಸಿಕೊಂಡ,
ಮೈ ಮರೆತವ ಭೋಗಿಯಾಗಿ ಭವರೋಗಿಯಾಗಿ ನೊಂದ,.
ಬದುಕು ಇದೊಂದು ಬೇಕು ಬೇಡಗಳ ಜಾತ್ರೆಯ ನಡುವಿನ ಸುಂದರ ಯಾತ್ರೆ
ಇಲ್ಲಿ ಅವಶ್ಯಕತೆಗೆ ಮೀರಿ ಈ ಜಗತ್ತಿನಲ್ಲಿ ಏನನ್ನೂ ನಿರೀಕ್ಷಿಸಬೇಡಿ ಅದು ಹೆಚ್ಚು ದುಃಖವನ್ನೇ ನೀಡುತ್ತದೆ,.
ಆದ ಕಾರಣ ಭವ ದುಃಖಿಯಾಗದೆ
ಬದುಕಿನ ಮೌಲ್ಯ, ಮತ್ತು ಆದರ್ಶಗಳನ್ನು ಅರಿತು ಸದಾಚಾರವಂತರಾಗಿ ಸಂತಸದಿಂದ ಸನ್ಮಾರ್ಗದ ಗುರಿಯತ್ತ ಸಾಗೋಣ,.
-ಲೋಕೇಶ್ ಎನ್ ಮಾನ್ವಿ