e-ಸುದ್ದಿ, ಮಸ್ಕಿ
ಪಟ್ಟಣದ ಮಲ್ಲಿಕಾರ್ಜುನ ಬೆಟ್ಟದ ಮೇಲಿರುವ ವೈರ್‍ಲೇಸ್ ನಿಯಂತ್ರಣ ಘಟಕಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಮ್ ಮಂಗಳವಾರ ಭೇಟಿ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಏಕೈಕ ವೈರ್‍ಲೇಸ್ ನಿಯಂತ್ರಣ ಘಟಕ ಇದಾಗಿದ್ದು, ಇದನ್ನು 1993 ರಲ್ಲಿ ನಿರ್ಮಿಸಿದ್ದರು. ಹಲವಾರು ವರ್ಷಗಳ ಹಿಂದೆ ಕಟ್ಟಡ ನಿರ್ಮಿಸಿದ್ದರಿಂದ ಶಿಥಿಲಗೊಂಡಿದ್ದರಿಂದ ಸ್ಥಳೀಯರ ಸಹಾಯದಿಂದ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲಾಗಿದ್ದು, ಕಾಮಗಾರಿಯನ್ನು ವೀಕ್ಷಣೆ ಮಾಡಲು ಆಗಮಿಸಿದ್ದಾಗಿ ತಿಳಿಸಿದರು.
ಈ ವೈರ್‍ಲೇಸ್ ನಿಯಂತ್ರಣ ಘಟಕದ ಕಟ್ಟಡವನ್ನು ಐಜಿಯವರು ಉದ್ಘಾಟಿಸಲಿದ್ದಾರೆ. ಉದ್ಘಾಟನೆ ದಿನಾಂಕವನ್ನು ನಿಗಡಿ ಪಡಿಸಿಲ್ಲವೆಂದು ಹೇಳಿದರು. ಸೋಮವಾರ ಪಟ್ಟಣದಲ್ಲಿ ಬೈಕ್ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮತ್ತು ಸಿಂಧನೂರಿನಲ್ಲಿ ಹಂದಿಗಳನ್ನು ಕಳ್ಳತನ ಮಾಡಿ ಗಂಗಾವತಿಯಲ್ಲಿ ಮಾರಾಟ ಮಾಡಿದವರನ್ನು ಬಂಧಿಸಲಾಗಿದ್ದು, ಬಂಧಿತರಿಂದ ಬೇರೆ ಕಡೆಗಳಲ್ಲಿ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಭೇಟಿ: ಪಟ್ಟಣದಲ್ಲಿರುವ 2ನೇ ಶ್ರೀಶೈಲವೆಂದು ಪ್ರಖ್ಯಾತಿ ಪಡೆದಿರುವ ಬೆಟ್ಟಡ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಮುದಗಲ್ ರಸ್ತೆಯಲ್ಲಿರುವ ಸಾಮ್ರಾಟ ಅಶೋಕ ಶಿಲಾಶಾಸಕನಕ್ಕೆ ಭೇಟಿ ಮಾಹಿತಿ ಪಡೆದುಕೊಂಡರು. ್ಲ ಲಿಂಗಸುಗೂರು ಡಿವೈಎಸ್‍ಪಿ ಹುಲ್ಲೂರು, ಸಿಪಿಐ ದೀಪಕ್ ಬೂಸರಡ್ಡಿ ಇದ್ದರು.