ಒಲವಿನ ಅಲೆ
ಮನಸಿನ ಸಾಗರದಲ್ಲಿ ಒಲವಿನ ಅಲೆ ಎಬ್ಬಿಸಿದೆ,
ಕಣ್ಣು ಮುಚ್ಚಿದರೂ ಕಾಡುವಂತೆ ನೀ ಸುಳಿದಾಡಿದೆ,
ಮರೆಯಲಾಗದ ಮಾತುಗಳ ಪದೇ ಪದೇ ಪಿಸುಗುಟ್ಟಿದೆ
ಸ್ನೇಹದ ಕೈ ಹಿಡಿದು,ಪ್ರೀತಿಯ ಹಾದಿ ತುಳಿಸಿದೆ
ನನ್ನಲಿ ನೀನಾದೆ, ನಿನ್ನಲಿ ನಾ ….????
ಕನಸಿಗೆ ಕಡಿವಾಣವಿಲ್ಲ
ಸ್ನೇಹಕೆ ಸಾವಿಲ್ಲ
ಸಾಗರಕೆ ಕೊನೆಯಿಲ್ಲ
ಕತ್ತಲಲ್ಲಿ ಬಾಳುವುದು ಒಳಿತಲ್ಲ,
ನಿನ್ನ ಪ್ರೀತಿಸದೆ ಇರಲು ಸಾಧ್ಯವಿಲ್ಲ,
ಮುಡಿಪಿಡುವೆ ನನ್ನ ಜೀವನ ನಿನಗೆಲ್ಲ,
–ಸೌವೀ. ಮಸ್ಕಿ
Nice