ಸಿದ್ಧಗಂಗೆಯ ಸಿದ್ಧಿ ಪುರುಷ
ಲಿಂಗೈಕ್ಯ ನಡೆದಾಡುವ ದೇವರು ಸಿದ್ಧಗಂಗೆಯ ಶ್ರೀ ಶ್ರೀ ಶ್ರೀಶಿವಕುಮಾರ ಸ್ವಾಮಿಗಳವರಿಗೆ ಅನಂತ ಅನಂತ ಶರಣು ಶರಣಾರ್ಥಿಗಳು…
ಕನ್ನಡಾಂಬೆಯ ಕರುಣೆಯ ಕಂದನಾಗಿ ಬಂದೆ
ಜಗವೆಲ್ಲವಕ್ಕೂ ಆನಂತ ತಂದೆ.
ತ್ರಿವಿಧ ದಾಸೋಹಕ್ಕಾಗಿ ಹುಟ್ಟಿ ಬಂದೆ.
ಸಿದ್ಧಗಂಗೆಯ ಸಿದ್ಧಿ ಪುರುಷನೆ ಶರಣು ಶರಣು,
ಅಕ್ಷರ ಜ್ಞಾನದ ಗಂಗೆಯ ಹರಿಸಿ,
ಹಸಿದ ಮಕ್ಕಳ ಒಡಲ ತಣಿಸಿ,
ಜಾತಿ ಭೇದಕೆ ಜಾಗವೆ ಇಲ್ಲದೆ ನೀತಿ ಮಾರ್ಗದಿ ನಡೆದ ಸಿದ್ಧಿ ಪುರುಷಗೆ ಶರಣು ಶರಣು,.
ಅಣ್ಣ ಬಸವಣ್ಣನ ನುಡಿಯನು
ಚಾಚೂ ತಪ್ಪದೆ ನಡೆಯಲಿ ತೋರಿದ’
ನಡೆದಾಡುವ ದೇವರಿಗೆ ಅನಂತ ಶರಣು,.
ಓ ಶತಮಾನದ ಸಂತ
ಮುಪ್ಪಿಗೊಪ್ಪದೆ ನಿಂತೆ’ ಜಂಗಮ ಲಿಂಗಿ”
ಓ ಧೀರ ಸಂತ
ನಡೆದಾಡುವ ದಿವ್ಯ ಚೇತನವೇ
ಆ ಸದಾ ಶಿವನ ಕುಮಾರನೆ
ಜಯ ಶ್ರೀ ಶಿವಕುಮಾರ ಗುರುವೇ ಶರಣಯ್ಯಾ ಶರಣು
ಕಾಯವೇ ಬಾಗಿದರು ಕಾಯಕ ಬಿಡದಂತೆ
ನಿಜ ಕಾಯಕಯೋಗಿಯಾಗಿ ಬದುಕಿದಿರಿ ನೀವು
ನಿಮಗೆ ನಮ್ಮ ಅನಂತ ಶರಣು ಶರಣು,.
ಹೊತ್ತಾರೆ ಎದ್ದು
ಲಿಂಗಾಂಗ ಯೋಗದಿ
ಸಂಗಯ್ಯನ ಕಂಡ
ನಿಜ ಬಸವಯೋಗಿ ಶಿವಕುಮಾರ
ಗುರುವೇ ಶರಣಯ್ಯಾ ಶರಣು..
ಮಕ್ಕಳೊಂದಿಗೆ ಮಗುವಾದೆ’
ಹಿರಿಯರಿಗೆಲ್ಲರಿಗೂ ಅನುಭವ ನೆಲೆಯಾದೆ’
ಶಿಕ್ಷಕರಿಗೆ ಉತ್ತಮ ಗುರುವಾದೆ,
ಈ ಜಗಕೆ ಸ್ಫೂರ್ತಿಯ ಸೆಲೆಯಾದೆ,
ಮಠಕ್ಕೆ ಶ್ರೇಷ್ಠ ಸಂತನಾದೆ,
ನಾಡಿಗೆ ನಡೆದಾಡುವ ದೇವರಾದೆ,
ಈ ದೇಶಕ್ಕೆ ಭಾರತ ರತ್ನ ನೀನಾದೆ,..
ಜ್ಞಾನ ಗಂಗೆಯ ಸಿದ್ಧಿ ಪುರುಷ “
ಸಿದ್ಧಗಂಗೆಯ ನಡೆದಾಡುವ ದೇವರೇ ನೀವು
ಇಷ್ಟಲಿಂಗದೊಳಗೆ ನಿಜ ಲಿಂಗೈಕ್ಯ..
ಲಿಂಗೈಕ್ಯ… ಲಿಂಗೈಕ್ಯ…
ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ..
ಸದಾ ನೀವು ಪೂಜಿಪ ಇಷ್ಟಲಿಂಗವೆಂಬ ನಿಜದ ನಿರ್ಬಯಲೊಳಗೆ ಲಿಂಗೈಕ್ಯ
ಸದಾ ಶಿವನ ಕುಮಾರ ಗುರುಗಳು
— ಲೋಕೇಶ್ ಎನ್ ಮಾನ್ವಿ