ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಿ-ದೀಪಕ್ ಬೂಸರಡ್ಡಿ

e-ಸುದ್ದಿ, ಮಸ್ಕಿ
ವಾಹನ ಸವಾರರು ಅಮೂಲ್ಯವಾದ ಜೀವವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ರಸ್ತೆಯ ನಿಯಮಗಳನ್ನು ಪಾಲಿಸಬೇಕು ಇದರಿಂದ ಅಪಘಾತಗಳನ್ನು ತಪ್ಪಿಸಬಹುದು ಎಂದು ಸಿಪಿಐ ದೀಪಕ್ ಬೂಸರಡ್ಡಿ ಹೇಳಿದರು.
ಪಟ್ಟಣ ಭ್ರಮಾರಂಬ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಠಾಣೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿನಿತ್ಯ ವಾಹನಗಳ ಅಪಘಾತಗಳಿಂದಲೇ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಪ್ರತಿಯೊಬ್ಬರು ವಾಹನ ಚಾಲನೆ ಮಾಡುವಾಗ ನಿರ್ಲಕ್ಷ್ಯವಹಿಸದೇ ಜಾಗೂರುಕತೆಯಿಂದ ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ವಾಹನ ಚಾಲನೆ ಮಾಡಬೇಕು ಎಂದರು.
ಪಿಎಸ್‍ಐ ಸಣ್ಣ ಈರೇಶ, ಶರಣ ಸಾಹಿತ್ಯ ಪರಿಷತ್ ಮಸ್ಕಿ ತಾಲೂಕು ಅಧ್ಯಕ್ಷ ವೀರೇಶ ಸೌದ್ರಿ ಮಾತನಾಡಿದರು. ಕಸಪಾ ಮಸ್ಕಿ ತಾಲೂಕು ಅಧ್ಯಕ್ಷ ಘನಮಠದಯ್ಯ ಸಾಲಿಮಠ ಇದ್ದರು.
ಕಾರ್ಯಕ್ರಮದಲ್ಲಿ ಆಟೋ, ಕಾರು ಚಾಲಕರ ಸಂಘದ ಸದಸ್ಯರು ಹಾಗೂ ವಿವಿಧ ಸಂಘಟನೆ ಮುಖಂಡರು ಹಾಗೂ ವರ್ತಕರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

Don`t copy text!