ಸೋತ ನೇಸರ!

ಸೋತ ನೇಸರ!

ಹಸಿರುಟ್ಟ ಭೂರಮೆಗೆ
ಪ್ರೀತಿಯಿತ್ತ ರವಿತಾನು
ಹೆಸರಿಟ್ಟ ಧರಣಿಗೆ
ಹೊಂಗಿರಣದ ಸಿರಿ ಭಾನು

ಬದುಕಿಟ್ಟ ಮಳೆಯೊಳಗೆ
ಭುವಿಗೆ ಹನಿ ಸುರಿದು
ಬೆಳಕಿಟ್ಟ ರಶ್ಮಿಯೊಳಗೆ
ಬಳಿಗವನೇ ಬಂದು

ಒಲವಿಟ್ಟ ಲತೆಬಳ್ಳಿಗೆ
ಮಣ್ಣೊಳಗೆ ಬೆರೆತು
ಬಣ್ಣವಿಟ್ಟ ಕೆಸರೊಳಗೆ
ತಾವರೆಯ ಹೂ ನಕ್ಕು

ಜೀವವಿಟ್ಟ ಜಲದೊಳಗೆ
ಅಮೃತದಂತೆ ಹರಿದು
ಜೀವನವಿಟ್ಟ ನೆಲದೊಳಗೆ
ತೆನೆತೆನೆ ಕಾಳಾಗಿ ಪೈರದು

ಬಂಗಾರವಿಟ್ಟ ನೇಸರನಾಗೆ
ಮುಂಜಾನೆಗೊಂದು ಮಾತು
ಶೃಂಗಾರವಿಟ್ಟ ಇಳೆಗೆ,
ಸವಿ ಸಂಜೆಗೆ ತಾನೇ ಸೋತು!.

ಸರೋಜಾ ಶ್ರೀಕಾಂತ್ ಅಮಾತಿ,ಮುಂಬೈ
ಮೊಬೈಲ್– 9769843865

—————————–

ಆತ್ಮೀಯ ಓದುಗ ಬಂಧುಗಳೇ,

ನಿನ್ನೆ ದಿನಾಂಕ ೨೪-೦೧-೨೦೨೧ ಭಾನುವಾರ ತಾಂತ್ರಿಕ ಕಾರಣದಿಂದ e-ಸುದ್ದಿ ಸಂಚಿಕೆ ಪ್ರಕಟವಾಗಲಿಲ್ಲ. ಬಹಳಷ್ಟು ಓದುಗರು ಕರೆ ಮಾಡಿದರು. ಓದುಗರ ಪ್ರೀತಿಗೆ ಚಿರರುಣಿ. ನಿಮ್ಮ e-ಸುದ್ದಿ ಸಂಚಿಕೆ ಪ್ರತಿದಿನ ನವನಾವಿನ್ಯದಿಂದ ರೂಪಿಸುವ ಕನಸು ನಮ್ಮದು. ನಮ್ಮ ಕನಸಿಗೆ ನಿಮ್ಮ ಬೆಂಬಲ ಶ್ರೀ ರಕ್ಷೆ. ಎಂದಿನಂತೆ e-ಸುದ್ದಿ ನಿಮ್ಮ ಮುಂದೆ ಸ್ವೀಕರಿಸಿ, ಪ್ರತಿಕ್ರಿಯಿಸಿರಿ

-ಸಂಪಾದಕ

One thought on “ಸೋತ ನೇಸರ!

Comments are closed.

Don`t copy text!