ಕವಿತೆ
“ಪ್ರೀತ್ಯಾಗ ಮುಳಗಿ”
ನನ್ನ ಗೆಳತಿ ಹೇಳತಾಳ
ನೀ ಪ್ರೀತ್ಯಾಗ ಮುಳಗಿ
ಹೌದು
ನಾ ಪ್ರೀತ್ಯಾಗ ಮುಳಗಿನಿ
ಹೆಣ್ತಿ ಪ್ರೀತ್ಯಾಗೂ ಮುಳಗಿನಿ
ಹಂಗ ಗೆಳತಿ ಪ್ರೀತ್ಯಾಗೂ ಮುಳಗಿನಿ
ಪ್ರೀತಿ ಅನೋದು ಹುಚ್ಚು
ಹಚ್ಚಗೊಂಡರ ಬಿಡಗಿಂಲ್ಲ
ಬಿಡಬೇಕಂದರ ಹೋಗದಲ್ಲ
ಹೇಣ್ತಿ ಪ್ರೀತಿ ಬದಕು ನಡೈಸಿತಿ
ಗೆಳತಿ ಪ್ರೀತಿ ಕನಸು ತುಂಬೈತಿ
ಬಣ್ಣ ಬಣ್ಣದ ಕನಸನ್ಯಾಗ ಹೆಣ್ತಿ ಯಾರು ಗೆಳತಿ ಯಾರು ತಿಳವಲ್ದ ಆಗೈತಿ
ಮಾಟದೊಳಗ ಹೆಣ್ತಿ, ಗೆಳತಿ ಬ್ಯಾರೆ ಬ್ಯಾರೆ ಕಾಣಸ್ತಾರ
ಮನಸ್ಸಿನ ತುಂಬ ಇಬ್ಬರ ತುಂಬಿಕೊಂಡು ಒಂದ ಆಗ್ಯಾರ
ಹೌದು
ಪ್ರೀತಿ ಅಂದರ ವಾತ್ಸಲ್ಯ, ಪ್ರೀತಿ ಅಂದರ ಮಮಕಾರ
ಹೌದು
ಪ್ರೀತಿ ಅಂದರ ನಶೆ ನಿಶೆ
ಪ್ರೀತಿ ಅಂದರ ಬಂಧ ಭಾವ
ಹೆಣ್ತಿ ಪ್ರೀತಿ ಸಂಸರಾದಾಗ
ಮಕ್ಕಳು ಮರಿ ಬಂಧು ಬಳಗ ಬಡದಾಡತೈತಿ
ಗೆಳತಿ ಪ್ರೀತಿ ಮನಸನ್ಯಾಗ
ಇಹ ಪರ, ಪ್ರೀತಿ ಪ್ರಣಯ
ವಾಸ್ತವ, ದೇವರು, ಅದು ಇದು
ಅಂತ ಗುದ್ಯಾಟ ನಡೆದೈತಿ
ಪ್ರೀತ್ಯಾಗ ಬಿದ್ದಾಗ ಇಬ್ಬರ ಬೇಕಾಗ್ಯಾರ
ಇಬ್ಬರು ಒಂದ ದಾರಿ ತೊರಸ್ತಾರ
ಅದಕ ನಾ ಪ್ರೀತ್ಯಾಗ ಮುಳಗಿನಿ
ನನ್ನ ಗೆಳತಿ ಅಂತಾಳ
ನೀ ಪ್ರೀತ್ಯಾಗ ಮುಳಗಿ
ಅಂದರ ಅನ್ನಲಿ
ನಾ ಮುಳಗಿದ್ದ ಕರೇ ಐತಿ
ಕೊರಳಲಿ ಕಟ್ಟಿದ ಬೆಂಡು ತೆಲಿಸ್ತತೈತಿ
ಕಾಲಿಗೆ ಕಟ್ಟಿದ ಗುಂಡು ಮುಳಗಸ್ತತೈತಿ
ಈಜಿ ಈಜಿ ದಡ ಸೇರಸಾಕ
ಹೆಣ್ತಿ ಗೆಳತಿ ಇಬ್ಬರ ಅದಾರ
ಪ್ರೀತಿ ಮುಳಗಸೊದಿಲ್ಲ, ಸಾಯೋಸೊದಿಲ್ಲ
ಯಾಕಂದ್ರ ನಾ ಪ್ರೀತ್ಯಾಗ ಮುಳಗಿನಿ
– ಸೌವೀ.
ಹೆಂಡತಿ ಪ್ರೀತಿ ಸಂಸಾರದಾಗ,ಗೆಳತಿ ಪ್ರೀತಿ ಮನಸಿನಾಗ
ಇಬ್ಬರೂ ಒಂದೇ ಹೃದಯದಾಗ,ಕವಿಯ ಕನಸಿನ್ಯಾಗ.
-ಕವಿಗೆ ಪ್ರೀತಿಯ ಅಭಿನಂದನೆಗಳು.